ತುಮಕೂರು

ನಿಯಮ ಬದಲಾವಣೆ ಉದ್ಯೋಗ ಸೃಷ್ಟಿಸಲ್ಲ

ತುಮಕೂರು:  ಸೆಕೆಂಡ್ ಲೇಬರ್ ಆಕ್ಟ್ ಬದಲಾವಣೆ ಮಾಡುವುದರಿಂದ ಯಾವುದೇ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎಂದು ಎಐಎಲ್ಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ರಮೇಶ್ ತಿಳಿಸಿದರು.
ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಸಂಘಟಿತರಾಗದ ಕಾರ್ಮಿಕರನ್ನು ಸಂಘಟಿಸುವ ಸಲುವಾಗಿ ಬಳ್ಳಾರಿಯಲ್ಲಿ ನಡೆಯುತ್ತಿರುವ ಸಿಐಟಿಯು ಜನರಲ್ ಕೌನ್ಸಿಲ್ ಸಭೆ ಹಿನ್ನೆಲೆಯಲ್ಲಿ ಕೆಜಿಎಫ್ನಿಂದ ಬಂದ ಜಾಥಾ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
ಹಿಂದೆ ಅಧಿಕಾರ ನಡೆಸಿದ ವಾಜಪೆಯಿ ನೇತೃತ್ವದ ಬಿಜೆಪಿ ಸರ್ಕಾರ ಸೆಕೆಂಡ್ ಲೇಬರ್ ಆಕ್ಟ್ 1948 ಅನ್ನು ಬದಲಾವಣೆ ಮಾಡಲು ಹೊರಟಿತ್ತು. ಈಗ ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿ ಮಾಡುತ್ತಿದೆ. ಇದರಿಂದ ಯಾವುದೇ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎಂದರು.
ಹಕ್ಕು ಕಸಿತ: ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈಲ್ವೆ ಬಜೆಟ್ ಮತ್ತು ಜನರಲ್ ಬಜೆಟ್ಗಳು ಯಾರ ಪರವಾಗಿ ಇವೆ ಎಂಬುದನ್ನು ಅರ್ಥಿಕ ತಜ್ಞರೇ ವಿಶ್ಲೇಷಿಸಿದ್ದಾರೆ. ಸರ್ಕಾರ ರಚನೆಯಾದ 4 ದಿನಗಳಲ್ಲಿ 100 ಜನ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಕಾರ್ಮಿಕರು ಟ್ರೇಡ್ ಯೂನಿಯನ್ಗಳನ್ನು ಕಟ್ಟಿಕೊಂಡು ಅವರ ಹಕ್ಕುಗಳ ಪಡೆಯಲು ಸಂಘಟಿತರಾಗುವ ಅವಕಾಶಕ್ಕೆ ತಿದ್ದುಪಡಿ ತರುವ ಮೂಲಕ ಸಂವಿಧಾನದ ಹಕ್ಕಿನಂತೆ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯುವುದನ್ನು ಮೊಟಕುಗೊಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ಒತ್ತೆ ಹುನ್ನಾರ: ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ವಿದೇಶಿ ನೇರ ಬಂಡವಾಳವನ್ನು ತರುವ ಮೂಲಕ ಇಡೀ ವ್ಯವಸ್ಥೆಯನ್ನೇ ಖಾಸಗೀಕರಣ ಮಾಡುವ ಮೂಲಕ ಭಾರತವನ್ನು ಒತ್ತೆ ಇಡಲು ಹೊರಟಿದೆ. ಅಮೇರಿಕಾದ ರಕ್ಷಣಾ ವ್ಯವಸ್ಥೆಯನ್ನು ಖಾಸಗೀಕರಣ ಮಾಡಿದ್ದರ ಭಾಗವಾಗಿ ಪೆಂಟಾಗಾನ್ ಮೇಲೆ ದಾಳಿ ನಡೆದದ್ದನ್ನು ನಾವು ಕಂಡಿದ್ದೇವೆ ಎಂದರು. ಎಲ್ಲಾ ರಂಗಗಳಲ್ಲಿ ವಿದೇಶಿ ನೇರ ಬಂಡವಾಳವನ್ನು ತರುವುದರಿಂದ ಉದ್ಯೋಗಗಳ ಸೃಷ್ಟಿಯಾಗುವುದಿಲ್ಲ ಎಂದರು.
ದರ ಏರಿಕೆ: ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ. ಉಮೇಶ್ ಮಾತನಾಡಿ, ಜನರ ಸಮಸ್ಯೆಗಳಿಗಿಂತ ಬಂಡವಾಳಗಾರರ ಪರವಾಗಿ ಕೆಲಸ ಮಾಡಲು ಸಿದ್ಧವಿರುವ ಕೇಂದ್ರದ ಬಿಜೆಪಿ ಸರ್ಕಾರ ಸಂಸತ್ನ ಬಜೆಟ್ ಮಂಡನೆಯಾಗುವುದಕ್ಕಿಂತ ಮುಂಚೆಯೇ ರೈಲ್ವೆ ಪ್ರಯಾಣ ದರ ಮತ್ತು ಪೆಟ್ರೋಲ್, ಡಿಸೇಲ್ ದರಗಳನ್ನು ಹೆಚ್ಚಳ ಮಾಡಿದೆ.
  ಆ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಹಣದ ಹೊಳೆಯನ್ನು ಹರಿಸಿದ್ದ ಬಂಡವಾಳಗಾರಿಗೆ ಲಾಭ ಮಾಡಿಕೊಡಲು ಬೆಲೆ ಏರಿಕೆಗಳನ್ನು ಮಾಡಿ ಬಜೆಟ್ನಲ್ಲೂ ಬಂಡವಾಳಗಾರರ ಋಣ ತಿರಿಸುವ ಕೆಲಸ ಮಾಡಿದ್ದಾರೆ ಎಂದರು.   ಸಭೆಯಲ್ಲಿ ಜಾಥದ ನೇತೃತ್ವ ವಹಿಸಿದ್ದ ಸಿಐಟಿಯು ರಾಜ್ಯ ಸಹಕಾರ್ಯದರ್ಶಿ ಸಿದ್ದಗಂಗಪ್ಪ, ರಾಜ್ಯ ಸಮಿತಿ ಸದಸ್ಯೆ ಲಕ್ಷ್ಮೀದೇವಮ್ಮ ಡಿವೈಎಫ್ಐ ತಾಲೂಕು ಅಧ್ಯಕ್ಷ ಬೋರೇಗೌಡ, ಕಟ್ಟಡ ಕಾರ್ಮಿಕ ಸಂಘದ ಶ್ರೀಧರ್, ಬಿಎಸ್ಎನ್ಎಲ್ ನೌಕರರ ಸಂಘದ ಶಶಿಕಿರಣ್ ಅಂಗನವಾಡಿ ನೌಕರರ ಸಂಘದ ಗಂಗಮ್ಮ ಉಪಸ್ಥಿತರಿದ್ದರು. ಸಿಐಟಿಯುನ ಪುಟ್ಟೇಗೌಡ ನಿರೂಪಿಸಿ ಡಿವೈಎಫ್ಐನ ಜಿಲ್ಲಾ ಉಪಾಧ್ಯಕ್ಷ ಎಂ.ಜಿ. ಮಂಜುನಾಥ್ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!