ತುಮಕೂರು

ಅವಕಾಶಗಳ ಸದ್ಬಳಕೆಗೆ ಮುಂದಾಗಿ

ಚಿಕ್ಕನಾಯಕನಹಳ್ಳಿ: ಅವಕಾಶ ವಂಚಿತರಾಗಿರುವ ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರಲು ದಿವ್ಯಜ್ಯೋತಿ ಕಲಾಸಂಘದಂತಹ ವೇದಿಕೆಗಳು ಬಹಳ ಉಪಯುಕ್ತ ಎಂದು ಕಿರುತೆರೆ ನಟ ಜೀವನ್ ನುಡಿದರು.
ಪಟ್ಟಣದಲ್ಲಿ ಆಷಾಢ-ಏಕಾದಶಿ ರಥೋತ್ಸವದ ಪ್ರಯುಕ್ತ ದಿವ್ಯಜ್ಯೋತಿ ಕಲಾಸಂಘ ಏರ್ಪಡಿಸಿದ್ದ ನವದಂಪತಿ ಸ್ಪರ್ಧೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಇಂದಿಗೂ ಹಳ್ಳಿಗಳಲ್ಲಿ ಅನೇಕ ಬಹುಮುಖ ಪ್ರತಿಭೆಗಳಿವೆ.ಅವರಿಗೆ ಸೂಕ್ತವಾದ ವೇದಿಕೆಗಳು ಸಿಗದೆ ಅವಕಾಶ ವಂಚಿತರಾಗಿ ಮುರುಟಿ ಹೋಗುತ್ತಿವೆ. ದಿವ್ಯಜ್ಯೋತಿ ಕಲಾ ಸಂಘದಂತಹ ವೇದಿಕೆಗಳು ಸಿಕ್ಕಲ್ಲಿ ಅವರು ಎತ್ತರಕ್ಕೆ ಬೆಳೆಯಬಹುದು.
ಸಾಮರಸ್ಯ: ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಸಿ.ಬಿ. ಸುರೇಶ್ ಬಾಬು,  ಶರಣರು ನುಡಿದಂತೆ ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು. ಗಂಡ ಹೆಂಡತಿ ಸಾಮರಸ್ಯದ ಜೀವನ ಕುಟುಂಬ ಏಳಿಗೆಗೆ ಸಹಕಾರಿ. ಬಾಳನೌಕೆಯಲ್ಲಿ, ಸಂಸಾರವೆಂಬ ಸಾಗರವ ದಾಟಲು ಬಾಳಪಯಣ ಸಮರಸದಿಂದ ಕೂಡಿರಬೇಕು ಎಂದರು.
ಸಂಘದ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತನಾಡಿ, ಇಲ್ಲಿನ ಸಾಹಿತ್ಯ ಮತ್ತು ಜಾನಪದ ರಂಗಗಳಿಗೆ ಸೂಕ್ತ ಸ್ಥಳಾವಕಾಶದ ಕೊರತೆಯಿದೆ. ಆದ್ದರಿಂದ ಇದೀಗ ನಿರ್ಮಾಣಗೊಳ್ಳುತ್ತಿರುವ ತೀನಂಶ್ರೀ ಭವನದ ಜೊತೆಗೆ ಜಾನಪದ ಕಲಾಭವನವನ್ನು ಸಹ ನಿರ್ಮಿಸಿದರೆ, ತಾಲೂಕಿನಲ್ಲಿ ನೂರಾರು ಜಾನಪದ ಕಲಾವಿದರಿಗೆ ಅನುಕೂಲವಾಗುತ್ತದೆ ಎಂದರು.
  ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಜೋಡಿಗೆ ಶಾಸಕರು ಡ್ರೆಸ್ಸಿಂಗ್ ಟೇಬಲ್ ಪ್ರಥಮ ಬಹುಮಾನವಾಗಿ ನೀಡಿದರು.
  ಸ್ಪರ್ಧೆಯಲ್ಲಿ 48 ಜೋಡಿ ನವದಂಪತಿಗಳು ಭಾಗವಹಿಸಿದ್ದರು. ವೈರಲ್ ಪೂಲ್ ವ್ಯವಸ್ಥಾಪಕ ವಿಜಯ ವಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.  ಗೌರವಾಧ್ಯಕ್ಷ ಗುರುಲಿಂಗಯ್ಯ, ತಹಶೀಲ್ದಾರ್ ಕಾಮಾಕ್ಷಮ್ಮ, ಪಿಎಸ್ ಐ ಮಹಾಲಕ್ಷ್ಮಮ್ಮ ಮುಂತಾದವರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!