ತುಮಕೂರು

ಆಹಾರ ವಿಧಾನ ಕ್ರಮಬದ್ಧವಾಗಿರಲಿ

ತುರುವೇಕೆರೆ: ಹೆಚ್ಚು ಉತ್ಪಾದನೆ ಹಠಕ್ಕೆ ಬಿದ್ದಿರುವ ನಾವು ಜಾನುವಾರಿಗೆ ರಾಸಾಯನಿಕ ಔಷಧ ನೀಡುತ್ತಿದ್ದು, ಈ ಹಾಲು ಸೇವಿಸುವ ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರು ಕಾಣುತ್ತಿದೆ ಎಂದು ಆಹಾರ ತಜ್ಞ ಡಾ.ಖಾದರ್ ಹೇಳಿದರು.
ತಾಲೂಕಿನ ಎನ್‌ಬಿಸಿ ಹೆಲ್ತ್ ಕೇರ್ ಕ್ಲಬ್‌ನಿಂದ ಆಯೋಜಿಸಿದ್ದ ನಾವೇನನ್ನು ತಿನ್ನುತ್ತಿದ್ದೇವೆ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಸಾಯನಿಕ ಪದಾರ್ಥ ಸೇವಿಸಿದ ಹಸುವಿನಿಂದ ಬಂದ ಹಾಲು ಸೇವಿಸಿದರೆ ಅಧಿಕ ಹಾರ್ಮೋನುಗಳು ಉತ್ಪಾದನೆಯಾಗಿ ಬಾಲ್ಯಾವಸ್ಥೆಯಲ್ಲಿರುವ ಹೆಣ್ಣುಮಕ್ಕಳು ಬಹು ಬೇಗನೆ ಯೌವನಕ್ಕೆ ಕಾಲಿಡುತ್ತಾರೆ. ಇಂತಹ ಕೃತಕ ಘಾತಕತನ ಅಗತ್ಯವಿದೆಯೇ ಎಂದು ಯೋಚಿಸಿ ಎಂದರು.
ಪಾಶ್ಚಾತ್ಯ ಅನುಕರಣೆಯಿಂದ ನಮ್ಮ ತನವನ್ನೆ ಕಳೆದುಕೊಂಡಿದ್ದೇವೆ. ದ್ವಿದಳ ಧಾನ್ಯಗಳ ಬಳಕೆ ಮರೆತಿದ್ದೇವೆ. ನಾರಿನ ಅಂಶಗಳಿರುವ ಆಹಾರ ಪದಾರ್ಥಗಳನ್ನು ಖರೀದಿ ಮಾಡುತ್ತಿಲ್ಲ.   ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಿ ಹೆಚ್ಚು ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಇದರಿಂದ ಭೂಮಿಯ ಸೈರ ನಾಶವಾಗುವುದರ ಜೊತೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದರು.  ನಾರಿನ ಅಂಶವಿರುವ ಸಿರಿ ಧಾನ್ಯಗಳಾದ ನವಣೆ, ಸಜ್ಜೆ, ಸಾಮೆ, ಅರ್ಕ, ಕೊರ್ಲು, ಬರಗು, ಬಿಳಿ ಜೋಳ, ರಾಗಿ ಮೊದಲಾದ ಧಾನ್ಯಗಳನ್ನು ಜನರಿಗೆ ಪರಿಚಯಿಸಲಾಯಿತು. ಕಾರ್ಯಕ್ರಮಕ್ಕೆ ಬಂದಿದ್ದವರು ರಾಗಿ ಮಾಲ್ಟ್, ರಾಗಿ ಇಡ್ಲಿ, ರಾಗಿ ದೋಸೆ, ಕಾಯಿ ಚಟ್ನಿ, ನವಣೆ ಅಕ್ಕಿ ಪಾಯಸ, ಸಾಮೆ ಅಕ್ಕಿ ಪಲಾವ್ ಸವಿದು ಸಂತಸ ಪಟ್ಟರು. ಮಕ್ಕಳ ತಜ್ಞ ಡಾ.ಬಿ. ನಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಬಿ. ಚಂದ್ರಶೇಖರ್, ಪಪಂ ಅಧ್ಯಕ್ಷೆ ನೇತ್ರಾವತಿ ರಂಗಸ್ವಾಮಿ, ಡಾ.ಎ. ನಾಗರಾಜು, ಎಂ.ಎಸ್. ಗಂಗಾಧರ್ ದೇವರಮನೆ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ: ಜೈಲಿಗೂ ಹೋಗಲು ಸಿದ್ಧ; CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು