ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳೆಗೆ ತನ್ನ ಸಾಮರ್ಥ್ಯದ ಅರಿವಿಲ್ಲ

Vishwanath S
Updated On : 17 Jul 2014, 1:09 am

ತುಮಕೂರು: ಮಹಿಳೆ ಸರ್ವಶಕ್ತಳು. ಮನೆಯ ಒಳಗೂ, ಹೊರಗೂ ಸಮರ್ಥವಾಗಿ ಯಾವುದೇ ಕೆಲಸವನ್ನು ಮಾಡಬಲ್ಲಳು. ಆದರೆ ಆಕೆಗೆ ತನ್ನ ಸಾಮರ್ಥ್ಯದ ಬಗ್ಗೆ ಅರಿವೇ ಇರುವುದಿಲ್ಲ ಎಂದು ಲೇಖಕಿ ಪದ್ಮಾ ಕೃಷ್ಣಮೂರ್ತಿ ವಿಷಾದಿಸಿದರು.
ತುಮಕೂರಿನ ಜಯನಗರದ ಸುನಿತಾ ಮೂರ್ತಿ ಸ್ನೇಹ ಬಳಗದ ವತಿಯಿಂದ ನಡೆದ ಮಹಿಳೆ ಮತ್ತು ಸ್ವಾತಂತ್ರ್ಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಸರ್ವಶಕ್ತ ಮಹಿಳೆ ತನ್ನಿಂದ ಏನೂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುವುದು ಸರಿಯಲ್ಲ. ಕೀಳರಿಮೆಯಿಂದ ದೂರ ಇರುವಂತೆ, ಆತ್ಮವಿಶ್ವಾಸದಿಂದ ಮುನ್ನುಗ್ಗುವಂತೆ, ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಸಮಾಜ ಸೇವಕಿ ಸುನಿತಾ ಮೂರ್ತಿ ಮಾತನಾಡಿ, ಮಹಿಳೆಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಆಕೆಯ ಸಮಸ್ಯೆಗಳು 50 ವರ್ಷಗಳ ಹಿಂದೆ ಹೇಗಿದ್ದವೋ ಈಗಲೂ ಹಾಗೆಯೇ ಇವೆ. ಆಕೆ ವಿದ್ಯಾವಂತೆಯಾಗಿ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಹೊಂದಬೇಕು ಎಂದರು.
ಜಯಸುಧಾ ಮಾತನಾಡಿ, ಹೆಣ್ಣು ಸದಾ ಪುರುಷರ ಆಶ್ರಯದಲ್ಲೇ ಇರಬೇಕಾದ ಪರಿಸ್ಥಿತಿಯಿದೆ. ಮೊದಲು ಆಕೆ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದರು.
ಯಶೋಧಾ ಮಾತನಾಡಿ, ಹೆಣ್ಣು ಮೊದಲು ತನ್ನ ಕುಟುಂಬದ ಕಡೆ ಗಮನ ಕೊಡಬೇಕು. ಮನೆಯವರ ಬೆಂಬಲ ಸಹಕಾರ ಪಡೆದರೆ ಆಕೆ ಸಾರ್ವಜನಿಕ ಬದುಕಲ್ಲಿ ಸೈ ಎನಿಸಿಕೊಳ್ಳುತ್ತಾಳೆ ಎಂದರು.
ಲಕ್ಕಮ್ಮ ಮಾತನಾಡಿ, ಇತ್ತೀಚೆಗೆ ನಿರಂತರವಾಗಿ ನಡೆದಿರುವ ಅತ್ಯಾಚಾರ ಪ್ರಕರಣಗಳನ್ನು ಉದಾಹರಿಸಿ, ಕಠಿಣ ಶಿಕ್ಷೆಯ ಮಹಿಳಾ ಪರ ಕಾನೂನುಗಳು ಇನ್ನಷ್ಟು ಬರಬೇಕು ಎಂದರು.
  ವಿಜಯ, ಪ್ರಮೀಳಾ, ಮಂಗಳಮ್ಮ ಇತರ ಮಹಿಳೆಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಜಯಸುಧಾ ಸ್ವಾಗತಿಸಿ, ವಿಜಯಮ್ಮ ವಂದಿಸಿ, ಯಶೋಧಾ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement