ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ದಲಿತರ ಸೌಲಭ್ಯ ಉಳ್ಳವರ ಪಾಲಾಗುತ್ತಿವೆ'

Mainashree
Updated On : 19 Jul 2014, 10:55 am

ಚಿಕ್ಕನಾಯಕನಹಳ್ಳಿ: ದಲಿತರ ಪಾಲಿನ ಸೌವಲತ್ತು ಕಬಳಿಸುವ ಹುನ್ನಾರವನ್ನು ದಲಿತ ಸಂಘಟನೆಗಳ ಸದಸ್ಯರು ಖಂಡಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಭೆಯಲ್ಲಿ ದಲಿತ ವರ್ಗಕ್ಕೆ ಸೇರಿದ ಅಧಿಕಾರಿಗಳ ವಿರುದ್ಧವೇ ಆರೋಪಗಳ ಸುರಿಮಳೆಯಾದವು. ಕಂದಿಕೆರೆ ಹೋಬಳಿಯ ಗ್ರಾಲೆಕ್ಕಾಧಿಕಾರಿ ಬಡವರು ಹ್ತತಿರ ಹೋದರೆ ಸಿಡಿಮಿಡಿಗುಟ್ಟತ್ತಾರೆ. ನಿಮ್ಮ ಬೆವರಿನ ವಾಸನೆ ನನಗೆ ಅಸಹ್ಯ ಹುಟ್ಟಿಸುತ್ತದೆ ಎಂದು ನಿಂದಿಸುತ್ತಾರೆ. ಇದರಿಂದ ನಾಗರಿಕರು ಸಮಸ್ಯೆಗಳ ಪರಿಹಾರಕ್ಕಾಗಿ ಮಧ್ಯವರ್ತಿಗಳ ಮೊರೆಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಮುಖಂಡರು ದೂರಿದರು.
ಇದಕ್ಕೆ ಸಭೆಯಲ್ಲಿ ಹಾಜರಿದ್ದ ಸದರಿ ಅಧಿಕಾರಿ ಸಮರ್ಥನೆ ನೀಡಲು ಮುಂದಾದಾಗ ವಿರೋಧ ವ್ಯಕ್ತವಾಯಿತು. ಇದರಿಂದ ಮಧ್ಯಪ್ರವೇಶಿಸಿದ ಶಾಸಕ ಸಿ.ಬಿ. ಸುರೇಶ್‌ಬಾಬು, ಸಾರ್ವಜನಿಕರು ಕರ್ತವ್ಯಕ್ಕೆ ತೊಂದರೆ ಮಾಡಿದರೆ ಕಾನೂನು ಮೊರೆ ಹೋಗಿ ಅದು ಬಿಟ್ಟು ಹೆದರಿಸುವುದು ಸರಿಯಲ್ಲ ಎಂದು  ಹೇಳಿದರು.
ತಾಲೂಕಿನ ದಲಿತ ಕಾಲೊನಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಿಸಲು ದಲಿತ ಮುಖಂಡ ಲಿಂಗದೇವರು ಆಗ್ರಹಿಸಿದರು. ಅರ್ಹ ದಲಿತ ಕುಟುಂಬಗಳಿಗೆ ಬಿಪಿಎಲ್ ಕಾರ್ಡುಗಳು ದೊರೆಯದೆ ಉಳ್ಳವರ ಪಾಲಾಗಿವೆ. ಇದು ಮಧ್ಯವರ್ತಿಗಳ ಮಹಿಮೆಯಿಂದ ಮಾರಾಟವಾಗಿವೆ. ಇದರಿಂದ ನಿಜವಾದ ಬಡವರಿಗೆ ಸವಲತ್ತು ಸಿಗುತ್ತಿಲ್ಲ ಎಂದು ರಾಮಚಂದ್ರಪ್ಪ ಆರೋಪಿಸಿದರು. ಪಡಿತರ ಚೀಟಿ ಮಾರುವ ಮಧ್ಯವರ್ತಿಗಳ ಪಟ್ಟಿ ನೀಡಲು ಸಿದ್ಧವಿರುವುದಾಗಿ ಅವರು ಸವಾಲೆಸೆದರು. ಸಮಾಜ ಕಲ್ಯಾಣ ಇಲಾಖೆ ಕಳೆದ 3 ವರ್ಷಗಳಿಂದ ಅಸ್ಪೃಶ್ಯ ನಿವಾರಣಾ ಕಾರ್ಯಕ್ರಮ ನಡೆಸದೆ ನಿರ್ಲಕ್ಷಿಸಿದೆ. ಅದಕ್ಕೆಂದೇ ಸರ್ಕಾರ ನೀಡಿರುವ ಅನುದಾನ ಶಿಕ್ಷಣ ಸಂಸ್ಥೆಗಳು ನಡೆಸುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಕಾಮಾಕ್ಷಮ್ಮ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯಕ್, ತಾಪಂ ಅಧ್ಯಕ್ಷೆ ಲತಾಕೇಶವಮೂರ್ತಿ, ಪುರಸಭಾಧ್ಯಕ್ಷೆ ಪುಷ್ಪಾವತಿ, ರಾಮಯ್ಯ, ಪುರಸಭೆ ಮುಖ್ಯಾಧಿಕಾರಿ ಟಿ.ಆರ್. ವೆಕಟೇಶಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement