ವರದಕ್ಷಿಣೆ ಕಿರುಕುಳ: ಮಗು ಜೊತೆ ಕೆರೆ ಪಾಲಾದ ತಾಯಿ
ಕುಣಿಗಲ್: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಮಗುವಿನೊಂದಿಗೆ ಶಿವನಹಳ್ಳಿ ಕರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ. ತಾಲೂಕಿನ ಹಾತನೂರು ಹೋಬಳಿ ಅರಕನಹಳ್ಳಿಯ ಸೌಮ್ಯ (23), ಮಗ ಹನೀಶ್ (18ತಿಂಗಳು) ಮೃತಪಟ್ಟವರು. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಕಳೆದ ಮೂರುವರ್ಷಗಳ ಹಿಂದೆ ಸೊಮ್ಯರನ್ನು ಮದುವೆಯಾಗಿದ್ದು, ವರದಕ್ಷಿಣೆಗಾಗಿ ನೀಡುತ್ತಿದ್ದ ಕಿರುಕುಳ ತಾಳಲಾರದೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೌಮ್ಯ ವಿವಾಹಕ್ಕೆ ಮೊದಲು ಶಿವನಹಳ್ಳಿ ಸಮೀಪದ ನಿಸರ್ಗ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಹೋದರ ಶಿವಕುಮಾರಸ್ವಾಮಿ ನೀಡಿದ ದೂರಿನ ಮೇರೆಗೆ ಹುಲಿಯೂರುದುರ್ಗ ಪಿಎಸ್‌ಐ ಧರ್ಮೇಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.