ತುಮಕೂರು

ನಷ್ಟ ಸಹಿಸದೆ ವ್ಯಕ್ತಿ ಆತ್ಮಹತ್ಯೆ

ಹುಳಿಯಾರು: ವ್ಯಾಪಾರದಲ್ಲಿ ನಷ್ಟ ಬಂದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಹೋಬಳಿಯ ಕಲ್ಲೇನಹಳ್ಳಿಯಲ್ಲಿ ಭಾನುವಾರ ನಡೆದಿದೆ. ಸಿ. ಭೂತಯ್ಯ(55) ಮೃತವ್ಯಕ್ತಿ. ಇವರು ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ತರಕಾರಿ ಹಾಗೂ ತೆಂಗಿನ ಕಾಯಿ ವ್ಯಾಪಾರ ಮಾಡುತಿದ್ದು, ವ್ಯಾಪಾರದಲ್ಲಿ ಆದ ನಷ್ಟದಿಂದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: 14 ಮಂದಿ ಬಂಧನ
ಹುಳಿಯಾರು: ಹೋಬಳಿಯ ಕೆಂಕೆರೆ ಹಾಗೂ ಅಮಾನಿಕೆರೆಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ ಪಟ್ಟಣದ ಪೊಲೀಸರು ಸುಮಾರು 2,080 ನಗದು ಹಾಗೂ 10 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ. ಪಿಎಸೈ ಘೋರ್ಪಡೆ ತಂಡ ಸೂಕ್ತ ಮಾಹಿತಿ ಮೇಲೆ ಕೆಂಕೆರೆಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ಮಾಡಿ 960 ನಗದು ಹಾಗೂ 4 ಮಂದಿಯನ್ನು ಬಂಧಿಸಿದ್ದಾರೆ. ಅಮಾನಿಕೆರೆಯ ಮತ್ತೊಂದು ಅಡ್ಡೆಯಲ್ಲಿ 6 ಮಂದಿಯನ್ನು ಬಂಧಿಸಿ 1120 ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮಾರಕಾಸ್ತ್ರಗಾಳಿಂದ ಕೊಚ್ಚಿ ಕೊಲೆ
ತುಮಕೂರು: ಕೇಬಲ್ ನೆಟ್ ವರ್ಕ್ ಕಾರ್ಮಿಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ  ತುಮಕೂರು ಹೊರವಲಯದ ಹೆಗ್ಗೆರೆಯಲ್ಲಿ ನಡೆದಿದೆ. ಮಂಜುನಾಥ್(36) ಕೊಲೆಯಾದ ವ್ಯಕ್ತಿ. ಕಳೆದ ರಾತ್ರಿ ತಮ್ಮ ನಿವಾಸಕ್ಕೆ ಹಿಂದಿರುಗುವ ವೇಳೆ ಹೆಗ್ಗೆರೆಯ ರೈಲ್ವೆ ಟ್ರ್ಯಾಕ್ ಸಮೀಪದ ನಿರ್ಜನ ಪ್ರದೇಶದಲ್ಲಿ ದುಷ್ಕರ್ಮಿಗಳು ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಭಾನುವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ತಡವಾಗಿ ಬರುತ್ತೇನೆಂದು ಹೇಳಿದ ಮಂಜುನಾಥ್ ಹೆಣವಾಗಿ ಕಂಡಿದ್ದರಿಂದ ಪೋಷಕರು ಮತ್ತು ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮನ್ ಗುಪ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಸಿಪಿಐ ರವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಸಿಪಿಐ ರವಿ ಪಿಎಸ್‌ಐ ಗಳಾದ ಅವಿನಾಶ್ ಶೇಷಾದ್ರಿ ನೇತೃತ್ವದ ತನಿಖಾ ತಂಡ ರಚಿಸಲಾಗಿದ್ದು ಸ್ನೇಹಿತರಿಂದಲೇ ಕೊಲೆಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಅಕ್ರಮ ಮರಳು: ಎರಡು ಜೆಸಿಬಿ ವಶ
ಕುಣಿಗಲ್: ತಾಲೂಕಿನ ಮಂಗಳಾಕೆರೆ ಅಂಗಳ ಮತ್ತು ಹುಯೂರುದುರ್ಗದ ಶಿವನಹಳ್ಳಿ ಕೆರೆ ಅಂಗಳದಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ತಂಡಗಳ ಮೇಲೆ ದಾಳಿ ನಡೆಸಿದ ಪೊಲೀಸರು ಎರಡು ಜೆಸಿಬಿ, ಎರಡು ಲಾರಿ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಅಮೃತೂರು ಠಾಣಾ ವ್ಯಾಪ್ತಿಯಲ್ಲಿನ ಮಂಗಳ ಕೆರೆ ಅಂಗಳದಲ್ಲಿ ಜೆಸಿಬಿ ಬಳಸಿ ಲಾರಿಗೆ ಮರಳು ತುಂಬುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಅಮೃತೂರು ಪೊಲೀಸರು, ಅಮೃತೂರಿನ ಗಣೇಶ್ ಎಂಬಾತನಿಗೆ ಸೇರಿದ ಜೆಸಿಬಿ ಹಾಗೂ ಎರಡು ಲಾರಿಗಳನ್ನು ಸರ್ಕಾರಿ ಜಾಗದಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ತುಂಬುತ್ತಿದ್ದುದರಿಂದ ಲಾರಿ ಚಾಲಕರು ಹಾಗೂ ಜೆಸಿಬಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಹುಲಿಯೂರುದುರ್ಗ ಹೋಬಳಿಯ ಶಿವನಹಳ್ಳಿ ಕೆರೆ ಅಂಗಳದಲ್ಲಿ ಕೆರೆಯಿಂದ ಮರಳನ್ನು ತೆಗೆದು ಸಂಗ್ರಹಿಸುತ್ತಿದ್ದ ಜೆಸಿಬಿ ಯಂತ್ರವನ್ನು ವಶಪಡಿಸಿಕೊಂಡು, ವಾಹನದ ಮಾಲೀಕರ ಮೇಲೆ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಿಪಟೂರಿಗೆ ಲೋಕಾ ಭೇಟಿ 23ಕ್ಕೆ
ತಿಪಟೂರು: ಪಟ್ಟಣದ ಪ್ರವಾಸಿ ಮಂದಿರಕ್ಕೆ ಜು.23ರಂದು ಬೆಳಿಗ್ಗೆ 11ಗಂಟೆಗೆ ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರು ಭೇಟಿ ನೀಡಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಯಾವುದಾದರೂ ಇಲಾಖೆ ಅಥವಾ ಅಧಿಕಾರಿಯಿಂದ ವಿನಾಕಾರಣ ತಮ್ಮ ಕೆಲಸಕಾರ್ಯಗಳು ಆಗದೆ ತೊಂದರೆಗಳಿದ್ದಲ್ಲಿ ಮತ್ತು ಬೇರೆ ಕುಂದುಕೊರತೆಗಳೇನಾದರೂ ಇದ್ದಲ್ಲಿ ಲೋಕಾಯುಕ್ತರಿಗೆ ಲಿಖಿತ ದೂರು ಸಲ್ಲಿಸಬಹದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಸ್ವದೇಶಿ ಸಂಸ್ಕೃತಿಯಿಂದ ಅತ್ಯುತ್ತಮ ಸಂಸ್ಕಾರ
ತಿಪಟೂರು: ಇದು ವೈಜ್ಞಾನಿಕ ಮತ್ತು ತಾಂತ್ರಿಕ ಯುಗ. ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಾಂತ್ರಿಕತೆಗೆ ಅತಿ ಹೆಚ್ಚಿನ ಮಹತ್ವ ನೀಡುವ ಮೂಲಕ ಆದರ್ಶ ಮತ್ತು ಸಾಧಕರಾದ ಅಬ್ದುಲ್ ಕಾಲಂ, ಸಿ.ವಿ.ರಾಮನ್, ಕಸ್ತೂರಿ ರಂಗನ್ ಅವರ ಸಾಧನೆ ಮೈಗೂಡಿಸಿಕೊಂಡು ಮುನ್ನಗ್ಗಬೇಕು ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ಪಟ್ಟಣದ ಹಾಸನ ರಸ್ತೆಯಲ್ಲಿ ಸುಕ್ಷೇತ್ರದ ಶ್ರೀ ಗುರುಪರದೇಶಿಕೇಂದ್ರ ವಿದ್ಯಾಸಂಸ್ಥೆ ನಡೆಸುತ್ತಿರುವ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ, ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ, ಶ್ರದ್ಧೆ, ಶಿಸ್ತು, ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ತಿಳಿಸಿದರು. ಸಂಸ್ಥೆಯ ಜೀಣೋದ್ಧಾರಕರಾದ ಚಿಕ್ಕಬಸವಯ್ಯ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕೆ ಕಾಲೇಜಿನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಪಠ್ಯ ಮತ್ತು ಪ್ರಯೋಗಾಲಯದ ತರಗತಿಗಳಲ್ಲಿ ಶ್ರದ್ಧೆಯಿಂದ ಕಲಿಬೇಕು ಎಂದು ತಿಳಿಸಿದರು. ಪ್ರಾಂಶುಪಾಲ ರಾಜಶೇಖರ್ ಮಾತನಾಡಿದರು. ಚಂದ್ರಶೇಖರ್ ಪ್ರಾರ್ಥಿಸಿ, ರಮೇಶ್ ನಿರೂಪಿಸಿ, ವಂದಿಸಿದರು.
ತುಂಬಾ ಕಷ್ಟ ಆಗ್ತಿದೆ, ಪ್ಲೀಸ್ ಶೌಚಾಲಯ ನಿರ್ಮಿಸಿ ಕೊಡಿ
ಶಿರಾ: ಗಡಿ ಗ್ರಾಮವಾದ ಬೊಪ್ಪನಡು ಗ್ರಾಮವು ನಾಗರಿಕ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಶೌಚಾಲಯ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಗೋಗರಿಯುತ್ತಿದ್ದಾರೆ. ಬೊಪ್ಪನಡು ಎಸ್.ಸಿ ಕಾಲೋನಿಯಲ್ಲಿ ಸುಮಾರು 40 ಮನೆಗಳಿದ್ದು, ಈ ಮನೆಗಳಿಗೆ ಒಂದೇ ಒಂದು ಶೌಚಾಲಯವಿಲ್ಲ. ಪಕ್ಕದ ಹಿಡುವಳಿ ಜಮೀನಿನಗೆ ಹೋಗಬೇಕಾಗಿದೆ. ಮಳೆಗಾಲ ಆರಂಭವಾಗಿರುವುದರಿಂದ ಜಮೀನುಗಳನ್ನು ಬಿತ್ತನೆಗೆ ಸಜ್ಜು ಮಾಡಲಾಗಿದೆ. ಹಾಗಾಗಿ ಅಲ್ಲಿ ಶೌಚಕ್ಕೆ ಹೋಗಲಾಗುವುದಿಲ್ಲ. ಶೌಚಾಲಯಗಳಿಲ್ಲದೆ ವಿಶೇಷವಾಗಿ ಹೆಣ್ಣುಮಕ್ಕಳು ಭಾರಿ ತೊಂದರೆಯನ್ನು ಅನುಭವಿಸಬೇಕಾಗಿದೆ. ಆಂಧ್ರದ ಗಡಿಯಲ್ಲಿರುವ ಈ ಗ್ರಾಮಕ್ಕೆ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸರಿಯಾದ ರಸ್ತೆಯೂ ಸಹ ಇಲ್ಲ. ಇಲ್ಲಿನ ಗ್ರಾಪಂ ಕೂಡಾ ಈ ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹಾಸಿ ಅಧ್ಯಕ್ಷೆ ಹಾಗೂ ಪಿಡಿಒ ಇತ್ತ ಗಮನ ಹರಿಸುತ್ತಿಲ್ಲ. ಶೌಚಾಲಯ ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಇಲ್ಲಿ ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಡಿ ಎಂದು ಬೇಡಿದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನುತ್ತಿಲ್ಲ ಎನ್ನುವುದ ವಿಪರ್ಯಾಸ.
ಪರಿಪೂರ್ಣ ಆಹಾರವೆಂದರೆ ಹಾಲು
ಕೊರಟಗೆರೆ: ಪರಿಪೂರ್ಣ ಆಹಾರ ಎಂದರೆ ಹಾಲು. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಹಾಲಿನ ಉತ್ಪನ್ನಗಳು ಹೆಚ್ಚಾಗುತ್ತಿವೆ ಎಂದು ಶಾಸಕ ಪಿ.ಆರ್. ಸುಧಾಕರ್‌ಲಾಲ್ ತಿಳಿಸಿದರು. ಪಟ್ಟಣದಲ್ಲಿನ ತಿರುಮಲ ಮಿಲ್ಕ್ ಡೈರಿಯ ಉತ್ಪನ್ನಗಳ ಪಾರ್ಲರ್ ಹೊಸ ಮಳಿಗೆ ಉದ್ಘಾಟಿಸಿ ಮಾತನಾಡಿ, ದಿನದಿಂದ ದಿನಕ್ಕೆ ಹಾಲಿನ ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ನಮ್ಮ ದೇಶದ ಉತ್ಪನ್ನಗಳು ಹೊರ ದೇಶದಲ್ಲಿ ಹೆಚ್ಚಿನ ಬೇಡಿಕೆಯಿದ್ದು ಈ ಹಿನ್ನೆಲೆಯಲ್ಲಿ ಕೇವಲ ರೈತರಿಂದ ಸಂಗ್ರಹಿಸಿದ ಹಾಲನ್ನು ಮಾತ್ರ ಮಾರಾಟ ಮಾಡದೆ ಅದರಿಂದ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುತ್ತಿರುವುದರಿಂದ ಮಾರುಕಟ್ಟೆ ಹೆಚ್ಚು ವಿಸ್ತರಣೆಯಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಹೆಚ್ಚಾಗಲಿದೆ ಎಂದರು. ತಿರುಮಲ ಮಿಲ್ಕ್ ಡೈರಿಯ ಮ್ಯಾನೇಜರ್ ಚಂದ್ರು, ನಾಗರಾಜು ಮಾಲೀಕರಾದ ರಾಮು ಮತ್ತು ಆಯಿಶಾ ಜೆಡಿಎಸ್ ಮುಖಂಡರಾದ ಕಾಕಿಮಲ್ಲಯ್ಯ, ಚೌಡಪ್ಪ, ಮಂಜುನಾಥ್, ಶಿವರಾಜ್, ಉಪನ್ಯಾಸಕ ಕೆ.ಎಸ್ ಈರಣ್ಣ, ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!