ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೆಸ್ಕಾಂಗೆ ಬಿಜೆಪಿ ಪ್ರತಿಭಟನೆ ಶಾಕ್ ಆ.4ಕ್ಕೆ

Mainashree
Updated On : 23 Jul 2014, 11:45 am

ಚಿಕ್ಕನಾಯಕನಹಳ್ಳಿ: ತಾಲೂಕು ಬೆಸ್ಕಾಂ ಇಲಾಖೆಯಲ್ಲಿ ದಿನನಿತ್ಯ ನಡೆಯುತ್ತಿರುವ ರೈತರ ಶೋಷಣೆ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಆ.4ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಸ್ಕಾಂ ಇಲಾಖೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ ನೀಡಲು ಹಣದ ಸುಲಿಗೆ ಮಾಡಲಾಗುತ್ತಿದೆ. ಸುಟ್ಟು ಹೋದ ಪರಿವರ್ತಕಗಳನ್ನು ಬದಲಾಯಿಸಲು ಹಣ ನೀಡದಿದ್ದರೆ ತಿಂಗಳಾದರು ಬದಲಾಯಿಸುವುದಿಲ್ಲ. ಲೋಡ್‌ಶೆಡ್ಡಿಂಗ್ ನೆಪದಲ್ಲಿ ಅನಿಯಮಿತವಾಗಿ ಪದೇ ಪದೇ ವಿದ್ಯುತ್ ನಿಲುಗಡೆ ಮಾಡುವುದರಿಂದ ಮೂರು ವರ್ಷಗಳಾದರೂ ಮಳೆ ಬಾರದೆ ರೈತರ ತೆಂಗು ಅಡಿಕೆ ತೋಟಗಳೆಲ್ಲಾ ಒಣಗಿ ನಿಂತಿವೆ.
ಸರ್ಕಾರವೇ ರೈತರ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಪರಿವರ್ತಗಳ ಬದಲಾವಣೆಗೆ ನೆಪ ಹೇಳಕೂಡದೆಂದು ಸೂಚಿಸಿದೆ. ಆದರೂ ಬೆಸ್ಕಾಂ ಅದೇ ರೀತಿ ವರ್ತಿಸುತ್ತಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದ ನಿರಂತರ ಜ್ಯೋತಿ ಯೋಜನೆ ಜಾರಿಗೆ ಗಮನಹರಿಸಿಲ್ಲ. ಈ ಯೋಜನೆಯ ಕಂಬಗಳನ್ನು ನೆಡುವಾಗ ದಾರಿ, ಮನೆಯ ಬಾಗಿಲುಗಳೆನ್ನದೆ ನೆಡುತ್ತಾರೆ. ರೈತರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಕಚೇರಿಗೆ ಹೋದರೆ ಖಾಲಿ ಕುರ್ಚಿಗಳು ರೈತರನ್ನು ಸ್ವಾಗತಿಸುತ್ತವೆ ಎಂದು ಆರೋಪಿಸಿದ್ದಾರೆ.
ಇಲಾಖೆಯ ಈ ಅವ್ಯವಸ್ಥೆ ವಿರುದ್ಧ ರಾಜ್ಯ ಬಿಜೆಪಿ ಕರೆ ನೀಡಿದ ಮೇರೆಗೆ ತಾಲೂಕು ಬಿಜೆಪಿ ಆ.4ರಂದು ಪ್ರತಿಭಟನೆಗೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ರೈತ ಮೋರ್ಚಾ ಅಧ್ಯಕ್ಷ ಪಾಂಡುರಂಗಯ್ಯ, ರೈತ ಮುಖಂಡ ಗಂಗಾಧರಯ್ಯ, ಪಾಂಡುರಂಗಯ್ಯ, ಚಂದ್ರಣ್ಣ, ಚನ್ನಬಸವಯ್ಯ, ಕಾರ್ಯದರ್ಶಿಗಳಾದ ಕಂದಿಕೆರೆ ರಾಜ್‌ಕುಮಾರ್, ಹನುಮಜಯ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಎ.ಬಿ.ಶರತ್‌ಕುಮಾರ್, ಶಿವಲಿಂಗಯ್ಯ, ನೀಲಕಂಠ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement