ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚಿ.ನಾ.ಹಳ್ಳಿ ಪುರಸಭೆಗೆ ಉಳಿತಾಯ ಬಜೆಟ್

Mainashree
Updated On : 25 Jul 2014, 11:13 am

ಚಿಕ್ಕನಾಯಕನಹಳ್ಳಿ: ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ 2014-15ನೇ ಸಾಲಿನ 14.94 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.
ಪುರಸಭಾ ಅಧ್ಯಕ್ಷೆ ಪುಷ್ಪಾವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್‌ಫ್‌ಸಿ ಮುಕ್ತನಿಧಿ ಯೋಜನೆಯ ಹಣಕಾಸು ಯೋಜನೆ ಕಾಮಗಾರಿಗಳ ಕ್ರಿಯಾಯೋಜನೆಗೆ ವಿಶೇಷ ಸಭೆಯಲ್ಲಿ ಪಡೆದ ಅನುಮೋದನೆಯಂತೆ ಬಜೆಟ್ ಮಂಡಿಸಿ ಚರ್ಚಿಸಲು ಸದಸ್ಯರಿಗೆ ಅವಕಾಶ ನೀಡಲಾಯಿತು.
2014-15ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿಯಲ್ಲಿ ಒಟ್ಟು 118.50 ಲಕ್ಷ ಹಣದಲ್ಲಿ ಅಭಿವೃದ್ಧಿ ಕಾಮಗಾರಿಗಳಾದ ಕುಡಿಯುವ ನೀರಿನ  ಜಲಸಂಗ್ರಹಗಾರದ ಸಾಮರ್ಥ್ಯ ಹಚ್ಚಿಸುವ ಉದ್ದೇಶದಿಂದ ಜಾಕ್‌ವೆಲ್ ಹತ್ತಿರ ಕೆರೆಯ ಹೂಳು ತೆಗೆಸಲು 14.96 ಲಕ್ಷ, ಘನತ್ಯಾಜ್ಯ ಘಟಕದಲ್ಲಿ ಎರೆಹುಳು ಗೊಬ್ಬರ ತಯಾರಿಸುವ ಮತ್ತು ನರ್ಸರಿ  ಫಾರಂಗೆ ನೀರೊದಗಿಸಲು 407 ಟ್ಯಾಂಕರ್ ಲಾರಿ ಖರೀದಿಸಲು, 14.96 ಲಕ್ಷ ಅಂದಾಜು ಮೊತ್ತ ನಿಗದಿಪಡಿಸಿದ್ದು ಅನುಮೋದನೆಗೆ ತರಲಾಯಿತು. ನಂತರ ಒಮ್ಮತಾಭಿಪ್ರಾಯದಿಂದ ಅನುಮೋದನೆ ನೀಡಿದರು.
ಸದಸ್ಯ ಟಿಂಬರ್ ಮಲ್ಲೇಶ್ ಮಾತನಾಡಿ, ಸಾರ್ವಜನಿಕ ಶೌಚಾಲಯ ನಿರ್ಮಾಣದಲ್ಲಿ ವಾರ್ಡ್‌ಗಳ ಹೊಂದಾಣಿಕೆ ಅಗತ್ಯ, ಪಟ್ಟಣದ ತರಕಾರಿ ಮಾರುಕಟ್ಟೆ ಬಳಿ ಶೌಚಾಲಯದ ಅವಶ್ಯಕತೆಯಿದೆ ಎಂದರು. ಸದರಿ ವಾರ್ಡ್ ಸದಸ್ಯರಿಂದ ಶೌಚಾಲಯ ಪ್ರಸ್ತಾವನೆಗೆ ವಿರೋಧ ವ್ಯಕ್ತವಾದಾಗ, ಪುರಸಭೆ ಜಾಗದಲ್ಲಿ ಶೌಚಾಲಯ ನಿರ್ಮಿಸಲು ವಿರೋಧ ಪಡಿಸುವುದು ತರವಲ್ಲ ಎಂದರು. ಇದಕ್ಕೆ ಇತರೆ ಕೆಲ ಸದಸ್ಯರು ದನಿಗೂಡಿಸಿದರು. ಇದೇ ಸಂದರ್ಭದಲ್ಲಿ ಸದಸ್ಯ ರೇಣುಕಮ್ಮ19ನೇ ವಾರ್ಡಿನ ಶೌಚಾಲಯದ ನಿರ್ಮಾಣ ಕಾರ್ಯ ಮುಗಿದಿದ್ದರು ಏಕೆ ಸಾರ್ವಜನಿಕರ ಬಳಕೆಗೆ ನೀಡಿಲ್ಲ ಎಂದು ಪ್ರಶ್ನಿಸಿದರು.
ಪುರಸಭೆಯ ಆರಂಭಿಕ ಶಿಲ್ಕು 478.33 ಲಕ್ಷದಿಂದ ಪ್ರಾರಂಭವಾದ ಬಜೆಟ್ ಚಾಲ್ತಿಸಾಲಿನ ಆದಾಯ  ಸೇರಿ 1274.50 ಲಕ್ಷ ನಿರೀಕ್ಷೆಯಲ್ಲಿ, ಒಟ್ಟು ಆದಾಯ 1752.83 ಲಕ್ಷ. ಇದರಲ್ಲಿ ಒಟ್ಟು ಖರ್ಚು 1737.89 ಲಕ್ಷ ಖರ್ಚಿನ ಬಾಬ್ತು ಕಳೆದು 14.94 ಉಳಿತಾಯ ಬಜೆಟ್ ಮಂಡನೆ ಅನುಮೋದನೆಯಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ನೇತ್ರಾವತಿ, ಹಿರಿಯ ಸದಸ್ಯರಾದ ಸಿ.ಎಂ. ರಂಗಸ್ವಾಮಿ, ಸಿ.ಟಿ. ದಯಾನಂದ್, ಮಲ್ಲೇಶ್, ಸಿ.ಎಸ್. ರಮೇಶ್, ಅಬ್ದುಲ್ ಖಲಂದರ್, ರೇಣುಕಮ್ಮ, ರೂಪಾ, ಎಚ್.ಬಿ. ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement