ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೇಗುಲ ನಿರ್ಮಾಣಕ್ಕೆ ದೇಣಿಗೆ

Mainashree
Updated On : 25 Jul 2014, 11:12 am

ಮಧುಗಿರಿ: ಪಟ್ಟಣದ 23ನೇ ವಾರ್ಡ್‌ನಲ್ಲಿ ಅನ್ನಪೂರ್ಣೇಶ್ವರಿ ಚಾರಿಟಬಲ್ ಟ್ರಸ್ಟ್‌ನಿಂದ ಅನ್ನಪೂರ್ಣೇಶ್ವರಿ ದೇವಸ್ಥಾನದ ಕಟ್ಟಡ ಕಾಮಗಾರಿ ಕೈಗೊಳ್ಳಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆ ಅವರು  1,ಲಕ್ಷ ರು.ಗಳ ಚೆಕ್ ಕಟ್ಟಡ ಸಹಾಯಾರ್ಥ ನೀಡಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ವಿ. ಮೂಡ್ಲಗಿರೀಶ್ ತಿಳಿಸಿದರು. ಟ್ರಸ್ಟ್ ಬಳಗ ಮತ್ತು ಭಕ್ತಾಧಿಗಳ ಸಹಕಾರದಿಂದ ಅನ್ನಪೂರ್ಣೇಶ್ವರಿ ದೇವಸ್ಥಾನ ಕಟ್ಟಡ ನಿರ್ಮಾಣವಾಗಲಿದ್ದು, ಭವ್ಯ ಕಟ್ಟಡಕ್ಕೆ 20ಲಕ್ಷ ಅಂದಾಜು ಪಟ್ಟಿ ತಯಾರಿಸಿದ್ದು ಭಕ್ತಾಧಿಗಳು ಉದಾರವಾಗಿ ಧನ ಸಹಾಯ ನೀಡಬೇಕೆಂದು ಮನವಿ ಮಾಡಿದರು. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಜಿನ್ನಪ್ಪ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ನೀಡಿರುವ 1 ಲಕ್ಷ ರು. ಚೆಕ್ಕನ್ನು ಅಧ್ಯಕ್ಷ ಎಂ.ವಿ. ಮೂಡ್ಲಗಿರೀಶ್ ಅವರಿಗೆ ನೀಡಿದರು.ಪುರಸಭೆ ಸದಸ್ಯ ಶ್ರೀದೇವಿ, ಸಂಘದ ಅಧ್ಯಕ್ಷೆ ಸುಜಾತ, ಮುಖಂಡ ತಿಪ್ಪಣ್ಣ, ಕಾಂತರಾಜು, ಗಂಗಾಧರ್, ರಾಜಣ್ಣ, ರಾಮಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement