ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಟ್ರಯಥ್ಲಾನ್ ಸ್ಪರ್ಧೆ ಆ.10ಕ್ಕೆ

Rashmi Kasaragodu
Updated On : 30 Jul 2014, 11:18 am

ಬೆಂಗಳೂರು: ಎಂಡುರೊ ಕ್ರೀಡಾ ವ್ಯವಸ್ಥಾಪಕ ಸಂಸ್ಥೆ ಆ.10ರಂದು ಪಾಂಡವಪುರ ಮತ್ತು ಮೇಲುಕೋಟೆ, ತೊಣ್ಣೂರು ಕೆರೆಯಲ್ಲಿ ಟ್ರಯಥ್ಲಾನ್ ಸ್ಪರ್ಧೆಯನ್ನು ವಿವಿಧ ವಿಭಾಗಗಳಲ್ಲಿ ಆಯೋಜಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವಕ್ತಾರ ಅಜಿತ್ ತಂಡೂರ್ ಮಾತನಾಡಿ, ಈ ಸ್ಪರ್ಧೆಗೆ ಎಲ್ಲಾ ವಿಭಾಗಗಳಲ್ಲೂ 9 ಬಾರಿ ವಿಜಯಿಯಾಗಿ ಕಬ್ಬಿಣದ ಮನುಷ್ಯ ಎಂದು ಬಿರುದು ಪಡೆದಿರುವ ದೀಪಕ್ ರಾಜ್ ರಾಯಭಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಟ್ರಯಥ್ಲಾನ್ ಮಾತ್ರವಲ್ಲದೇ ಡುಯಥ್ಲಾನ್(ನೀರಿನಲ್ಲಿ ಸೈಕ್ಲಿಂಗ್ ಮತ್ತು ಓಟ) ಮತ್ತು ಅಕ್ವತ್‌ಲಾನ್ (ನೀರಿನಲ್ಲಿ ಈಜುವುದು ಮತ್ತು ಓಟ) ಸ್ಪರ್ಧೆಗಳೂ ನಡೆಯಲಿದ್ದು ಪ್ರತಿ ಸ್ಪರ್ಧೆಯಲ್ಲಿ ಕಿ.ಮೀ.ಗಳಲ್ಲಿ ವ್ಯತ್ಯಾಸವಿರುತ್ತದೆ ಎಂದು ಹೇಳಿದರು. ಟ್ರಯಥ್ಲಾನ್(ಈಜು, ಸೈಕ್ಲಿಂಗ್, ಓಟ), ಸ್ಪ್ರಿಂಟ್ ಡಿಸೈನ್ಸ್, ಈಜು 750 ಮೀ. ಸೈಕ್ಲಿಂಗ್ 20 ಕಿ.ಮೀ. ಓಟ 5 ಕಿ.ಮೀ, ಒಲಂಪಿಕ್ ಡಿಸ್ಟೆನ್ಸ್-ಈಜು 1.5 ಕಿ.ಮೀ, 40 ಕಿ.ಮೀ ಸೈಕ್ಲಿಂಗ್, 10 ಕಿ.ಮೀ ಓಟ, ಆಫ್ ಐರನ್ ಡಿಸ್ಟೆನ್ಸ್, ಈಜು 1.9 ಕಿ.ಮೀ, ಸೈಕ್ಲಿಂಗ್ 90 ಕಿ.ಮೀ, ಓಟ-21.1 ಕಿ.ಮೀನಲ್ಲಿ ನಡೆಯಲಿದೆ. ಈ ಸ್ಪರ್ಧೆಗೆ ಕ್ರೀಡಾ ಸಲಕರಣೆಗಳನ್ನು ಒದಗಿಸುವ ಉತ್ಕೃಷ್ಟ ಕಂಪನಿಯಾದ ಸ್ಕಾಟ್ ಹಾಗೂ ಸ್ಪರ್ಶ್ ಆಸ್ಪತ್ರೆ ಪ್ರಯೋಜಕತ್ವ ನೀಡಿದ್ದು ಆಸಕ್ತರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement