ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೈಸರ್ಗಿಕ ನೀರಾವರಿಗೆ ಆದ್ಯತೆ

Rashmi Kasaragodu
Updated On : 30 Jul 2014, 11:10 am

ಚಿಕ್ಕನಾಯಕನಹಳ್ಳಿ: ನೈಸರ್ಗಿಕ ನೀರಾವರಿ ಯೋಜನೆಗಳು ಬರದೆ ರೈತರ ಬವಣೆ ತೀರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ತಾಲೂಕಿನ ತೀರ್ಥಪುರ ಮತ್ತು ಕಾತ್ರಿಕೆ ಹಾಳ್ ಗ್ರಾಮಗಳಲ್ಲಿ ಜನಸಂಪರ್ಕ ಸಭೆಗಳಲ್ಲಿ ಮಾತನಾಡಿ, ತಾಲೂಕು ಸತತ ಬರಗಾಲದಿಂದ ತತ್ತರಿಸಿದೆ. ಎತ್ತಿನ ಹೊಳೆ, ಹೇಮಾವತಿ, ಭದ್ರಾಮೇಲ್ದಂಡೆಗಳನ್ನು ಜೋಡಿಸಿ ತುಮಕೂರು ಜಿಲ್ಲೆಗೆ ನೀರು ತರಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ. ಅಧಿವೇಶನ      ಮುಗಿದನಂತರ ಮುಖ್ಯಮಂತ್ರಿಗಳು ಮತ್ತು ತಜ್ಞರ ಜೊತೆ ಚರ್ಚಿಸಿ ನೀರಾವರಿಗಾಗಿ ಸತತ ಪ್ರಯತ್ನ ಮಾಡಲಾಗುವುದು ಎಂದರು.
ತಾಲೂಕು ಕೇಂದ್ರದಲ್ಲೂ ಪಹಣಿ ವಿತರಿಸಿ: ರೈತರು ತಮ್ಮ ಜಮೀನಿನಿ ಪಹಣಿ ನಕಲು ಆಯಾ ಹೋಬಳಿ ನಾಡಕಚೇರಿಗಳಲ್ಲಿ ಪಡೆಯ ಬೇಕೆಂಬ ನಿಬಂಧನೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಕಂದಿಕೆರೆ ನಾಡಕಚೇರಿಗೆ ಹೋಗಲು ಕಾತ್ರಿಕೆಹಾಳ್ ಮತ್ತು ತೀರ್ಥಪುರದ ರೈತರು 25 ಕಿ.ಮೀ ಹೋಗಬೇಕು. ಆದರ ಬದಲು ತಾಲೂಕು ಕೇಂದ್ರದಲ್ಲಿ ಪಹಣಿ ನೀಡಿವುದು ಅನುಕೂಲವಾಗಿದೆ ಆದರೆ ತಾಲೂಕು ಕಚೇರಿಯಲ್ಲಿ ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ರೈತರು ಸಚಿವರಿಗೆ ದೂರಿದರು.
ಇದಕ್ಕೆ ಸಚಿವರು ಸ್ಥಳದಲ್ಲೇ ಇದ್ದ ತಹಸೀಲ್ದಾರ್‌ಗೆ ತಾಲೂಕು ಕೇಂದ್ರದಲ್ಲಿ ಪಹಣಿ ನೀಡಲು ತಾಕೀತು ಮಾಡಿದರು.
ಗೋಶಾಲೆ ತೆರೆಯಲು ಸೂಚನೆ: ವಾಡಿಕೆಯಂತೆ ಮಳೆ ಬಾರದ ಕಾರಣ ತಾಲೂಕಿನಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿದೆ. ಜಾನುವಾರುಗಳನ್ನು ರೈತರು ಸುಧಾರಿಸುವುದು ಕಷ್ಟವಾಗಿದ್ದು, ಕೂಡಲೇ ತಾಲೂಕಿನ ಮೂರ್ನಾಲ್ಕು ಕಡೆ ಗೋಶಾಲೆ ತೆರೆಯುವಂತೆ ಅವರು ತಹಸೀಲ್ದಾರ್‌ಗೆ ಸೂಚಿಸಿದರು. ಈಸಂದರ್ಭದಲ್ಲಿ ಸಾಸಕ ಸಿ.ಬಿ. ಸುರೇಶ್‌ಬಾಬು, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಸಮಿತಿ ಅಧ್ಯಕ್ಷ ತೀರ್ಥಪುರ ವಾಸು, ಸೀಮೆಎಣ್ಣೆ ಕೃಷ್ಣಯ್ಯ, ಎಚ್.ಬಿ. ನಾರಾಯಮಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement