ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಲಿಗಾಡೆ ಸಾಧನೆ ಸ್ಮರಣಾರ್ಹ

Rashmi Kasaragodu
Updated On : 30 Jul 2014, 11:12 am

ತಿಪಟೂರು: ಶತಮಾನದ ಹಿಂದೆ ಸೊಲ್ಲಾಪುರ ಎಂಬ ಗಡಿನಾಡಿನಲ್ಲಿ ಜನಿಸಿದ ಧೀಮಂತ ಮಹಿಳೆ ಜಯದೇವಿ ತಾಯಿ ಲಿಗಾಡೆ. ಇವರು ಕಲಿತಿದ್ದು, ಮರಾಠಿಯಾದರೂ, ಮಾತೃಭಾಷೆ ಕನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ, 8ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡದಲ್ಲಿ ರಚಿಸಿ ಕನ್ನಡಕ್ಕಾಗಿ ಬದುಕನ್ನೇ ಮುಡುಪಾಗಿಟ್ಟರು ಎಂದು ಉಪನ್ಯಾಸಕ ವಿದ್ವಾನ್ ಎಂ.ಜಿ. ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ಗೋವಿನಪುರದ ಅನ್ನಪೂರ್ಣೇಶ್ವರಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಕಸಾಪ ಕಸಬಾ ಹೋಬಳಿ ಘಟಕದ ವತಿಯಿಂದ ಡಾ.ಜಯದೇವಿತಾಯಿ ಲಿಗಾಡೆಯವರ 29ನೇ ಸ್ಮರಣೋತ್ಸವ ಸಮಾರಂಭದಲ್ಲಿ ಕನ್ನಡ ಪ್ರಜ್ಞೆ ಕುರಿತು ಉಪನ್ಯಾಸ ನೀಡಿದರು.
ಮಾದರಿ: ಉದ್ಘಾಟನೆ ಮಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣೇಗೌಡ ಲಿಗಾಡೆಯವರ ಜೀವನವೇ ಇಂದು ನಮಗೆಲ್ಲಾ ಆದರ್ಶ ಎಂದು ಬದುಕನ್ನು ಪರಿಚಯಿಸಿದರು. ಕಸಾಪ ತಾ.ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ಮಾತನಾಡಿ ಹಿಂದಿನವರ ಸಾಹಿತ್ಯ ಪರಿಚಯ ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ಕಸಾಪ ತಲುಪಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಬ್ಬರಿ ವರ್ತಕ ಪರಮಶಿವಯ್ಯ ಐದು ದಶಕಗಳ ಹಿಂದಿನ ತಿಪಟೂರಿನ ಕನ್ನಡ ಸಂಘದ ಚಟುವಟಿಕೆಗಳನ್ನು ಸ್ಮರಿಸಿಕೊಳ್ಳುತ್ತಾ, ಅಂದು ಲಿಗಾಡೆಯವರು ತಿಪಟೂರಿಗೆ ಬಂದಾಗಿನ ಘಟನೆ ಮೆಲುಕು ಹಾಕಿದರು. ಬಿಳಿಗೆರೆಯ ಪ್ರತಾಪ್ ಸಿಂಗ್ ಮಾತನಾಡಿದರು. ನಗರ ಕಸಾಪ ಘಟಕ ಅಧ್ಯಕ್ಷ ಮಾಕಳ್ಳಿ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತ.ಶಿ. ಬಸವಮೂರ್ತಿ ಪ್ರಾರ್ಥಿಸಿ, ದಿವಾಕರ್ ನಿರೂಪಿಸಿ, ಶಶಿಕಲಾ ಸೋಮಶೇಖರ್ ಸ್ವಾಗತಿಸಿ, ಗುರುಶಾಂತಯ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement