ರೈತರಿಗೆ ಕೃಷಿ ಸಲಕರಣೆಗಳ ವಿತರಣೆ
ಗುಬ್ಬಿ: ರೈತರ ಅಭ್ಯುದಯಕ್ಕೆ ಕೃಷಿ ಇಲಾಖೆ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ರೈತರು ಕೃಷಿ ಇಲಾಖೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದುವಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪಲತಾಪ್ರಭಾಕರ್ ಹೇಳಿದರು. ತಾಲೂಕಿನ ಕಡಬಾ ಹೋಬಳಿ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಒರಟು ಧಾನ್ಯ ಪ್ರಾತ್ಯಕ್ಷಿಕೆ ರಾಗಿ ಬೆಳೆಗಾಗಿ ರಾಗಿ ಬಿತ್ತನೆ ಹಾಗೂ ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಾಯಕ ಕೃಷಿ ಅಧಿಕಾರಿ ನಂಜಪ್ಪ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಕಡಬಾ ಹೋಬಳಿ ವ್ಯಾಪ್ತಿಯಲ್ಲಿ 125 ಎಕರೆ ಪ್ರದೇಶದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಒರಟು ಧಾನ್ಯ ಪ್ರಾತ್ಯಕಕ್ಷಿಕೆಯನ್ನು ರಾಗಿ ಬೆಳೆಗಾಗಿ 90 ರ್ಯತ ಫಲಾನುಭವಿಗಳಿಗೆ ರಾಗಿ ಬಿತ್ತನೆ ಹಾಗೂ ತೃಷಿ ಪರಿಕರಗಳನ್ನು ವಿತರಿಸಲಾಗುತ್ತಿದೆ.
ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ರುದ್ರಪ್ಪ, ಜಿಪಂ ಮಾಜಿ ಸದಸ್ಯ ಎಚ್.ಸಿ.ಪ್ರಭಾಕರ್ ಸೇರಿದಂತೆ ಕಡಬಾ ಹೋಬಳಿ ವ್ಯಾಪ್ತಿಯ ರೈತ ಫಲಾನುಭವಿಗಳು ಭಾಗವಹಿಸಿದ್ದರು.