ಸೋಡಿಯಂ ದೀಪ ಅಳವಡಿಸಲು ನಾಗರಿಕರ ಒತ್ತಾಯ
ತುಮಕೂರು: ತುಮಕೂರು ನಗರಪಾಲಿಕೆಯ 25ನೇ ವಾರ್ಡ್ನ ವ್ಯಾಪ್ತಿಯ ವಿವಿಧ ರಸ್ತೆಗಳಲ್ಲಿ ಸೋಡಿಯಂ ದೀಪ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ ಎಂದು ಪಾಲಿಕೆ ಸದಸ್ಯೆ ವಿಜಯರುದ್ರೇಶ್ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿನ 50 ಟ್ಯೂಬ್ಲೈಟ್ ಫಿಟ್ಟಿಂಗ್ ಗಳು ಪದೇ-ಪದೇ ರಿಪೇರಿಗೆ ಬರುತ್ತಿದ್ದು, ಇವುಗಳ ಬದಲಿಗೆ ಸೋಡಿಯಂ ದೀಪ ಅಳವಡಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಸಾರ್ವಜನಿಕರ ಭಾವನೆಗಳಿಗೆ ಸ್ಪಂದಿಸಿ, ಬೇಡಿಕೆ ಈಡೇರಿಸುವಂತೆ ಆಯುಕ್ತರಿಗೆ ವಿಜಯ ರುದ್ರೇಶ್ ಮನವಿ ಮಾಡಿದ್ದಾರೆ. ಇಲ್ಲದೇ ಹೋದಲ್ಲಿ ಈ ಭಾಗದ ನಾಗರಿಕರೊಡಗೂಡಿ ಮಹಾನಗರಪಾಲಿಕೆ ಎದುರಲ್ಲಿ ಪ್ರತಿಭಟನಾ ಧರಣಿ ನಡೆಸುವುದಾಗಿ ವಿಜಯರುದ್ರೇಶ್ ಎಚ್ಚರಿಕೆ ನೀಡಿದ್ದಾರೆ.