ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ
ಪಾವಗಡ: ತಾಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಮೀಸಲು ಅನ್ವಯ ಕಾಯ್ದಿರಿಸಿದ ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಉಷಾ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ತುಮಕೂರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ತಾಲೂಕಿನ ಬಿ.ಕೆ.ಹಳ್ಳಿ ಗ್ರಾಪಂನ ವಡ್ರೇವು, ಪೋತಗಾನಹಳ್ಳಿ ಗ್ರಾಪಂನ ಆರ್.ಡಿ. ರೊಪ್ಪ ಈ ಎರಡು ಅಂಗನವಾಡಿ ಕೇಂದ್ರಗಳಿಗೆ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹಾಗೆಯೇ ತಾಲೂಕಿನ 9 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯ ಹುದ್ದೆಗಳು ಖಾಲಿ ಇದ್ದು ಮೀಸಲು ಅನ್ವಯ ಪಳವಳ್ಳಿ ಗ್ರಾಪಂನ ಕ್ಯಾತಗಾನಕೆರೆ ತಾಂಡ, ವೆಂಕಟಾಪುರ ಗ್ರಾಪಂನ ಕೃಷ್ಣಾಪುರ, ನೇರಳಗುಂಟೆ,ಕನ್ನಮೇಡಿ ಗ್ರಾಪಂನ ಕಿರ್ಲಾಲಹಳ್ಳಿ ಸೇರಿದಂತೆ ಮೇಲ್ಕಂಡ 4 ಅಂಗನವಾಡಿ ಕೇಂದ್ರಗಳಿಗೆ ಎಸ್‌ಸಿ ವರ್ಗಕ್ಕೆ ಸೇರಿದ ಮಹಿಳೆಯರು ಅರ್ಜಿ ಸಲ್ಲಿಸಲು ಅವಕಾಶವಿದ್ದು ನಿಡಗಲ್ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಎಸ್‌ಟಿ ಹಾಗೂ ನ್ಯಾಯದಗುಂಟೆ ಗ್ರಾಪಂನ ದೇವರಾಯನರೊಪ್ಪ, ಕೆ.ಟಿ.ಹಳ್ಳಿ ಗ್ರಾಪಂನ ದೇವಲಕೆರೆ, ಅರಸೀಕೆರೆ ಗ್ರಾಪಂನ ಕಳಾರಾಜನಹಳ್ಳಿ, ರಾಜವಂತಿ1, ಈ ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಈಗಾಗಲೇ ಕಚೆರಿಯಲ್ಲಿ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು ಇಲಾಖೆ ನಿಬಂಧನೆಗಳ ಅನ್ವಯ ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 26, ಸಂಜೆ 5.30ರೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶ್ರೀನಿವಾಸ ನಗರ, ಪಾವಗಡ ಇಲ್ಲಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ನಿಯಮನುಸಾರ ಕಾರ್ಯಕರ್ತೆ ಮತ್ತು ಸಹಾಯಕಿರ ನೇಮಕಾತಿ ಪ್ರಕ್ರಿಯೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಮಧ್ಯವರ್ತಿಗಳ ಆಮಿಷಗಳಿಗೆ ಒಳಗಾಗಿ ಮೋಸಹೋಗಬಾರರೆಂದು ಸಿಡಿಪಿಒ ಉಷಾ ಅವರು ತಿಳಿಸಿದ್ದು ಆಸಕ್ತರು, ವಿವರಗಳಿಗೆ ಸಿಡಿಪಿಒ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.
6 ರಂದು ಟಿಇಟಿ ಕಾರ್ಯಾಗಾರ
ತುರುವೇಕೆರೆ: ಟಿಇಟಿ (ಟೀಚರ್ಸ್ ಎಬಿಲಿಟಿ ಟೆಸ್ಟ್) ಒಂದು ದಿನದ ಕಾರ್ಯಾಗಾರವನ್ನು ಜೂ. 6 ರಂದು ಪಟ್ಟಣದಲ್ಲಿರುವ ಬಿಆರ್‌ಸಿ ಕೇಂದ್ರದಲ್ಲಿ ನಡೆಸಲಾಗುವುದು. ಜೂ.14 ರಲ್ಲಿ ನಡೆಯಲಿರುವ ಟಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ಮತ್ತು ಪೂರ್ವಭಾವಿ ತಿಳುವಳಿಕೆ ನೀಡುವ ಸಲುವಾಗಿ ತಾಲೂಕು ಹಂತದಲ್ಲಿ ನಡೆಸಲಾಗುವ ಈ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೊದಲು 3 ರಂದು ಕಾರ್ಯಾಗಾರ ನಡೆಯಲಿದೆ ಎಂದು ಪ್ರಕಟಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದ ಕಾರ್ಯಾಗಾರವನ್ನು 6 ಕ್ಕೆ ಮುಂದೂಡಿರುವುದಾಗಿಯೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.