ಅನುದಾನ ಬಿಡುಗಡೆ
ಶಿರಾ : ಡಾ.ನಂಜುಂಡಪ್ಪ ವರದಿ ಆಧಾರಿತ ಶಿರಾ ತಾಲೂಕಿಗೆ ಗ್ರಾಮೀಣ ಕುಡಿಯುವ ನೀರು ಪೂರೈಕೆಗಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ 2014-15 ನೇ ಸಾಲಿಗಾಗಿ ಅನುದಾನ ಬಿಡುಗಡೆಯಾಗಿದೆ.
ಒಟ್ಟಾರೆ 3.67 ಕೋಟಿ ರೂ. ಹಂಚಿಕೆ ಮೊತ್ತವಾಗಿದ್ದು ಇದರಲ್ಲಿ ಮೊದಲ ಕಂತಾಗಿ 91.991 ಲಕ್ಷ ರು. ಬಿಡುಗಡೆಯಾಗಿದೆ.
ಹೆಚ್ಚಿನ ಸೇವೆ ನೀಡಲು ಶಿಖರ್ ಬ್ರಾಂಚ್ ಉದ್ಘಾಟನೆ, ಶಿರಾ: ಭಾರತದಲ್ಲಿಯೇ ಮೊದಲ ಬಾರಿಗೆ ಶಿರಾ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರಿಗೆ ಅನುಕೂಲವಾಗಲೆಂದು ಹಾಗೂ ಹೆಚ್ಚಿನ ಸೇವೆ ನೀಡಲು ಶಿಖರ್ ಬ್ರಾಂಚ್ ಅನ್ನು ಜೂನ್ 4 ಬುಧವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಾಗುತ್ತಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕರಾದ ಭಾರತಿ ಪಾಟೀಲ್ ತಿಳಿಸಿದ್ದಾರೆ.
ಶಿಖರ್ ಬ್ರಾಂಚ್ನಿಂದ ಗ್ರಾಹಕರು ಇನ್ನು ಮುಂದೆ ಎ.ಟಿ.ಎಂ.ನಲ್ಲಿ 25 ಸಾವಿರ ರು. ವರೆಗೆ ಹಣ ಪಡೆಯಬಹುದು. ಕ್ಯಾನ್ ಎಕ್ಸ್ಪ್ರೆಸ್ ಈ-ಲಾಂಗ್ ಮೂಲಕ ಪಾಸ್ಬುಕ್ ಎಂಟ್ರಿ ವ್ಯವಸ್ಥೆ ಇರುತ್ತದೆ. 30 ಸಾವಿರ ರು.ಗಳ ವರೆಗೆ ಕ್ಯಾಷ್ ಡಿಪಾಸಿಟ್ ಮಾಡಬಹುದು ಎಂದು ಶಾಖೆಯ ಅನುಕೂಲದ ಬಗ್ಗೆ ತಿಳಿಸಿದರು.