ಭೂಚೇತನ ಯೋಜನೆಯಡಿ ಮಾಹಿತಿ ಸಭೆ ಇಂದು
ಹುಳಿಯಾರು: ಪ್ರಸಕ್ತ ಸಾಲಿನ ಭೂಚೇತನ ಯೋಜನೆಯಡಿ ಗುಚ್ಚಗ್ರಾಮದ ಮಾಹಿತಿ ಸಭೆಯನ್ನು ಮಂಗಳವಾರ ಬೆಳಿಗ್ಗೆ 10 ಕ್ಕೆ ಹೋಬಳಿಯ ಗಾಣದಾಳು , ಮಧ್ಯಾಹ್ನ 2 ಕ್ಕೆ ಕೆಂಕೆರೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಸುತ್ತಮುತ್ತಲ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆಯಬೇಕೆಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಉಮೇಶ್ ತಿಳಿಸಿದ್ದಾರೆ.