ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಾನವೀಯ ಸೇವೆ ವೈದ್ಯಕೀಯ ಚಿಕಿತ್ಸೆಗಿಂತ ಹೆಚ್ಚು ಪರಿಣಾಮಕಾರಿ

Rashmi Kasaragodu
Updated On : 4 Jun 2014, 1:18 am

ಶಿರಾ: ಮಾನವೀಯ ಸೇವೆ ವೈದ್ಯಕೀಯ ಚಿಕಿತ್ಸೆಗಿಂತ ಹೆಚ್ಚು ಪರಿಣಾಮಕಾರಿ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಕೆ.ತಿಮ್ಮರಾಜು ತಿಳಿಸಿದರು.
ಅವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ಶುಶ್ರೂಷಕಿಯರ ದಿನಾಚರಣೆ ಅಂಗವಾಗಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ಹಣ್ಣು ವಿತರಿಸಿ ಮಾತನಾಡುತ್ತಿದ್ದರು. ಎರಡನೇ ಮಹಾ ಯುದ್ಧದಲ್ಲಿ ಶುಶ್ರೂಷಕಿ ಫ್ಲಾರೆನ್ಸೆ ನೈಟಿಂಗೇಲ್ ಅವರು ಸೈನಿಕರಿಗೆ ಸಲ್ಲಿಸಿದ ಸೇವೆ ನೆನಪಿನಲ್ಲಿ ಪ್ರತಿ ವರ್ಷ ವಿಶ್ವದಾದ್ಯಂತ ಶುಶ್ರೂಷಕಿಯರ ದಿನಾಚರಣೆ ನಡೆಯುತ್ತದೆ. ಆ ಮೂಲಕ ಸೇವೆ ಮಾಡುವ ದಾದಿಯರಿಗೆ ಗೌರವ ಸಲ್ಲಿಸುವುದು ಈ ಆಚರಣೆಯ ಉದ್ದೇಶವಾಗಿದೆ ಎಂದರು.  ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ, ಡಾ.ಡಿ.ಎಂ.ಗೌಡ, ಡಾ. ಶ್ರೀಧರ್, ಡಾ.ಅಜ್ಗರ್ ಬೇಗ್, ಶುಶ್ರೂಷಕಿ ಪುಟ್ಟಗಂಗಮ್ಮ, ಕೋಮಲ, ಮಂಜಮ್ಮ, ಶಾಮಲಾ, ಇಬ್ರಾಹಿಂ, ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement