ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗುರುಕುಲ ಶಾಲೆಯಲ್ಲಿ ಅಕ್ಷರಾಭ್ಯಾಸ

Rashmi Kasaragodu
Updated On : 6 Jun 2014, 1:53 am

ತುರುವೇಕೆರೆ: ತಾಲೂಕಿನ ಚಿಮ್ಮನಹಳ್ಳಿಯ ಸುಕ್ಷೇತ್ರ ಮುನೀಶ್ವರನಗರದ ಗುರುಕುಲ ವಿದ್ಯಾಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಶಾಲೆಗೆ ಚಾಲನೆ ನೀಡಲಾಯಿತು. ಗುರುಕುಲ ಮಂದಿರದಲ್ಲಿ ನೂತನವಾಗಿ ಪ್ರಾರಂಭಗೊಂಡ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಎಲ್ಲಾ ಮಕ್ಕಳ ಪೋಷಕರೂ ತಮ್ಮ ಮಕ್ಕಳೊಂದಿಗೆ ಶ್ರೀ ಗಣಪತಿ, ದಕ್ಷಿಣಾಮೂರ್ತಿ, ಶಾರದಾಂಬೆಗೆ ಪೂಜೆ ಸಲ್ಲಿಸಿದರು. ಪೋಷಕರು ತಮ್ಮ ಮಕ್ಕಳ ಕೈಯಿಂದ ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಸಿದರು.
ಮಕ್ಕಳ ಬಾಯಿಗೆ ಚಿನ್ನದ ಉಂಗುರದಿಂದ ಅದ್ದಿದ ಜೈನುತುಪ್ಪದ ಹನಿಯನ್ನು ಹಾಕುವ ಮೂಲಕ ನೆರವೇರಿಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿ ಕೆ.ಎಸ್.ಜವರಪ್ಪ, ಕಾರ್ಯದರ್ಶಿ ಆರ್.ಎಚ್.ಧನಲಕ್ಷ್ಮಿ ಶಿವಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement