ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೇಶದ ಅಭಿವೃದ್ಧಿಯಲ್ಲಿ ಹೈನುಗಾರಿಕೆ ಪ್ರಧಾನ ಪಾತ್ರ

Rashmi Kasaragodu
Updated On : 6 Jun 2014, 1:52 am

ಕೊರಟಗೆರೆ:  ಗ್ರಾಮೀಣ ಭಾಗದಲ್ಲಿ ರೈತರು ಆರ್ಥಿಕವಾಗಿ ಸಬಲೀಕರಣ ಹೊಂದಲು ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆ ದಾರಿ ದೀಪವಾಗಿದ್ದು ದೇಶದ ಅಭಿವೃದ್ಧಿಯಲ್ಲಿ ಹೈನುಗಾರಿಕೆ ಪ್ರಧಾನ ಪಾತ್ರ ವಹಿಸಿದೆ ಎಂದು ಹಾಲು ಉತ್ಪಾದಕ ಒಕ್ಕೂಟದ ನಿರ್ದೇಶಕ ಎಂ.ಪಿ. ವಿಜಯಶಂಕರ್ (ಸೋಮಣ್ಣ) ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ನಂದಿನಿ ಕ್ಷೀರ ಮತ್ತು ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೆ ಸ್ಥಾನದಲ್ಲಿದ್ದು ಜಾಗತೀಕರಣದಿಂದ ಮತ್ತೆ ಜನರು ಹೈನುಗಾರಿಕೆಯನ್ನು ಅಳವಡಿಸಿಕೊಂಡು ಸ್ವಂತ ಉದ್ದಿಮೆಯಲ್ಲಿ
ತೊಡಗುತ್ತಿದ್ದಾರೆ ಎಂಬುದು ಸಂತೋಷದ ವಿಷಯವಾಗಿದೆ ಎಂದ ಅವರು ಕೊರಟಗೆರೆ ಪಟ್ಟಣದಲ್ಲಿ ಪ್ರಾರಂಭಿಸಿರುವ ನಂದಿನಿ ಕ್ಷೀರ ಮಳಿಗೆಯಲ್ಲಿ ನಂದಿನಿ ಉತ್ಪನ್ನಗಳನ್ನು  ಜೂ.8 ರವರೆಗೆ ಶೇ. 10 ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಗ್ರಾಹಕರು ಅದರ ಸದುಪಯೋಗ ಪಡೆಯುವಂತೆ ತಿಳಿಸಿದರು.
 ತುಮಕೂರು ಹಾಲು ಉತ್ಪಾದಕ ಒಕ್ಕೂಟದ ಉಪಾಧ್ಯಕ್ಷ ಖಲೀಲ್ ಉಲ್ಲಾಬೇಗ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪ.ಪಂ.ಸದಸ್ಯರಾದ ಕೆ.ವಿ.ಮಂಜುನಾಥ್, ಓಬಲರಾಜು, ಕೆ.ಬಿ.ಲೋಕೇಶ್, ಕೆ.ವಿ.ಪುರುಷೋತ್ತಮ್, ಸುರೇಶ್, ಮುಖಂಡರಾದ ರಿಯಾಸತ್ ಅಲಿ, ನಾಗಾನಾಯ್ಕ್, ವಡ್ಡಗೆರೆ ಕಾಂತರಾಜು, ಲಾರಿಮಲ್ಲಣ್ಣ, ರಂಗ ಧಾಮಯ್ಯ, ಮಹೇಶ್‌ಚೌದ್ರಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement