ರಾಮೇಶ್ವರ ಪ್ರೌಢಶಾಲೆಯಲ್ಲಿ ಪರಿಸರ ದಿನ ಆಚರಣೆ
ಕನ್ನಡಪ್ರಭ ವಾರ್ತೆ, ತುಮಕೂರು, ಜೂ.5
ಪರಿಸರ ಪ್ರೇಮಿ ಗುಂಗರಮಳೆ ಮುರಳೀಧರ್ ಅವರ ನೇತೃತ್ವದಲ್ಲಿ ತಿಪಟೂರು ತಾಲೂಕಿನ ಬಿಸಲೆಹಳ್ಳಿಯ ಶ್ರೀ ಬೆಟ್ಟದ ರಾಮೇಶ್ವರ ಪ್ರೌಢಶಾಲೆಯಲ್ಲಿ ಪರಿಸರ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುರಳೀಧರ್ ಜಾಗತಿಕ ಮಟ್ಟದಲ್ಲಿ ದ್ವೀಪ ರಾಷ್ಟ್ರಗಳ ರಕ್ಷಣೆ ಬಗ್ಗೆ ನಿಲುವು ತೆಗೆದುಕೊಂಡರೆ ನಮ್ಮೂರುಗಳಲ್ಲಿ ಇರುವ ದ್ವೀಪಗಳಾದ ಗುಂಡುತೋಪು, ಗೋಮಾಳ, ನೇರಳೆತೋಪು, ಇಪ್ಪೆತೋಪು, ಹೊಂಗೆತೋಪು ಮಾವಿನತೋಪುಗಳ ರಕ್ಷಣೆ ಹಾಗೆ ಊರ ಸುತ್ತಾಮುತ್ತಾ ಇರುವ ಚಿಕ್ಕ ಪುಟ್ಟ ಕಟ್ಟೆಗಳ ರಕ್ಷಣೆಯು ಸಹ ಜಾಗತಿಕ ಮಟ್ಟದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಸುತ್ತಮುತ್ತಲಿನ ಹಳ್ಳಿಗರು ಸಹ ಗೋಮಾಳ, ಗೋವು, ಕುರಿ, ಮೇಕೆ, ಎಮ್ಮೆಗಳಿಗೆ ಮೀಸಲಿಡಬೇಕು. ಇಲ್ಲಿ ಕಾರ್ಖಾನೆಗಳು ಯಾವುದೇ ಕಾರಣಕ್ಕೂ ಬೇಡವೆಂದು ತಮ್ಮ ಹೈನುಗಳ ಜೊತೆಯಲ್ಲಿ ಬಂದು ವಿಶ್ವಪರಿಸರ ದಿನವನ್ನು ಆಚರಿಸಿದರು.
ಬಿಸಲೆಹಳ್ಳಿಯ ಶ್ರೀ ಬೆಟ್ಟದ ರಾಮೇಶ್ವರ ಫ್ರೌಢಶಾಲೆಯ ಮಕ್ಕಳು ಶಾಲಾ ಮಖ್ಯಶಿಕ್ಷಕರಾದ ಕೃಷ್ಣಪ್ಪ ಶಿಕ್ಷಕರು ಹಾಗೂ ಕಲ್ಲಹಳ್ಳಿ ಬಿಸಲೆಹಳ್ಳಿಯ ಗ್ರಾಮಸ್ಥರು ಭಾಗವಹಿಸಿದ್ದರು. ಶಾಲಾ ಶಿಕ್ಷಕ ರಂಗಪ್ಪ ಸ್ವಾಗತಿಸಿ, ವಂದನಾರ್ಪಣೆಯನ್ನು ಮಲ್ಲಿಕಾರ್ಜುನಪ್ಪ ನಡೆಸಿಕೊಟ್ಟರು.