ಯುವತಿ-ಮಹಿಳೆ ನಾಪತ್ತೆ
ತುರುವೇಕೆರೆ: ಮಧ್ಯ ವಯಸ್ಸಿನ ಮಹಿಳೆಯೊಬ್ಬಳು ಯುವತಿಯೊಬ್ಬಳೊಂದಿಗೆ ನಾಪತ್ತೆಯಾಗಿರುವ ಪ್ರಕರಣ ತಾಲೂಕಿನ ದಂಡಿನ ಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ದಂಡಿನಶಿವರ ಹೋಬಳಿ ಕೊಂಡಜ್ಜಿ ಕೊಪ್ಪದ ನಿವಾಸಿ ಶಿವಯ್ಯ ಎಂಬುವವರ ಪತ್ನಿ ನರಸಮ್ಮ(45) ಹಾಗೂ ರಾಯಸಂದ್ರದ ನಿವಾಸಿ ಲೇ.ನರಸಿಂಹಯ್ಯ ಪುತ್ರಿ ಲಕ್ಷ್ಮಿದೇವಿ(19) ಒಟ್ಟಿಗೆ ಕಾಣೆಯಾಗಿದ್ದಾರೆ ಎಂದು ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೋಟದ ಕೆಲಸಕ್ಕೆಂದು ಮನೆ ಬಿಟ್ಟು ಹೋಗಿದ್ದ ಇಬ್ಬರೂ ಮನೆಗೆ ಹಿಂತಿರುಗಿಲ್ಲ. ಸುಳಿವು ಸಿಕ್ಕಲ್ಲಿ ತುಮಕೂರು ಎಸ್ಪಿ ಕಚೇರಿ, ದೂ -0816-2272451, ಪೊಲೀಸ್ ಕಂಟ್ರೋಲ್ ರೂಂ-0816-2278000, ಅಥವಾ ತುರುವೇಕೆರೆ ಸಿಪಿಐ ಆಫೀಸ್ 08139-287466, ದಂಡಿನಶಿವರ ಪೊಲೀಸ್ ಠಾಣೆ 08139-278355 ಗೆ ಸಂಪರ್ಕಿಸಲು ಕೋರಲಾಗಿದೆ