ಸ್ತ್ರೀ ಶಕ್ತಿ ಗುಂಪಿಗೆ ಪ್ರೋತ್ಸಾಹ ಧನ ವಿತರಣೆ
ತುರುವೇಕೆರೆ: ತಾಲೂಕಿನ ಹಲವಾರು ಸ್ತ್ರೀ ಶಕ್ತಿ ಗುಂಪುಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯಿಂದ ನೀಡಲಾಗುವ ವಿವಿಧ ಯೋಜನೆಗಳಾದ ಕಿರು ಸಾಲ, ಪ್ರೋತ್ಸಾಹ ಧನ, ಸುತ್ತು ನಿಧಿಗಳನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಬಿಡುಗಡೆ ಮಾಡಿದರು. ಇಂದಿರಾ ನಗರದ ಇಂದಿರಾ ಗಾಂಧಿ ಸ್ತ್ರೀ ಶಕ್ತಿ ಸಂಘಕ್ಕೆ ಕಿರುಸಾಲವಾಗಿ 1 ಲಕ್ಷ ರು.ಗಳು, ಡಿ.ಪಾಳ್ಯದ ಕನ್ನಿಕಾ ಪರಮೇಶ್ವರಿ ಸಂಘ, ಮೇಲಿನವರಗೇನಹಳ್ಳಿಯ ಚಿಕ್ಕಮ್ಮ ಸಂಘ,
ಮಾದಾಪಟ್ಟಣದ ಕೆಂಪಮ್ಮ ಸಂಘ, ಚಾಕುವಳ್ಳಿ ಪಾಳ್ಯದ ಸರಸ್ವತಿ ಸಂಘ, ಹನುಮಾಪುರದ ಶನಿದೇವರ ಸಂಘ, ಬೀಚನಹಳ್ಳಿಯ ತುಳಸಿ ಸಂಘ, ಜಿ. ದೊಡ್ಡೇರಿಯ ಹಚ್ಚಮ್ಮ ದೇವಿ ಸಂಘಕ್ಕೆ ಪ್ರೋತ್ಸಾಹ ಧನವಾಗಿ ತಲಾ 5 ಸಾವಿರ ರು.ಗಳನ್ನು, ಬ್ಯಾಡರಹಳ್ಳಿಯ ಲಕ್ಷ್ಮೀದೇವಿ ಸಂಘ ಹಾಗೂ ಪುಟ್ಟ ಮಾದಿಹಳ್ಳಿಯ ತಾತಯ್ಯ ಸ್ತ್ರೀಶಕ್ತಿ ಸಂಘಕ್ಕೆ ತಲಾ 15 ಸಾವಿರ ರು.ಗಳ ಪ್ರೋತ್ಸಾಹ ಧನವನ್ನು ಶಾಸಕ ಎಂ.ಟಿ.ಕೃಷ್ಣಪ್ಪ ವಿತರಣೆ ಮಾಡಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿ.ಟಿ. ವೆಂಕಟರಾಮಯ್ಯ, ಇ. ಓ. ವಾಳ್ವೇಕರ್, ಎಪಿಎಂಸಿ ಅಧ್ಯಕ್ಷ ಬಸವರಾಜು, ಸಿಡಿಪಿಓ ರವೀಂದ್ರ ಮೊದಲಾದವರು ಇದ್ದರು.