ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಸ್ಲಂ ಜನರನ್ನು ಒಕ್ಕಲೆಬ್ಬಿಸಬೇಡಿ'

Rashmi Kasaragodu
Updated On : 7 Jun 2014, 1:05 am

ತುಮಕೂರು: ಬೆಂಗಳೂರಿನ ಜೈ ಭುವನೇಶ್ವರಿ ನಗರ ಸ್ಲಂ ಪ್ರದೇಶವನ್ನು ಒಕ್ಕಲೆಬಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ತುಮಕೂರಿನ ಕೊಳಗೇರಿ ಹಿತರಕ್ಷಣಾ ಸಮಿತಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಬೆಂಗಳೂರಿನ ನಿಮ್ಹಾನ್ಸ್ ಹತ್ತಿರವಿರುವ ಜೈ ಭುವನೇಶ್ವರಿ ನಗರ ಕೊಳಚೆ ಪ್ರದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಒಕ್ಕಲೆಬ್ಬಿಸದಂತೆ ತಡೆಯಾಜ್ಞೆ ನೀಡಿದ್ದರು. ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಪೊಲೀಸ್ ಸಿಬ್ಬಂದಿ ಸೇರಿ  ಇಲ್ಲಿನ 800 ಕುಟುಂಬಗಳನ್ನು ಬೀದಿಗೆ ತಳ್ಳಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಶಾಲೆ ಪ್ರಾರಂಭವಾದ ಮೊದಲ ವಾರದಲ್ಲೇ ಸಾವಿರಾರು ಮಕ್ಕಳು ಶಾಲೆಗೆ ಹೋಗದಂತೆ ಉಚ್ಚ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ದ್ವಂಸಗೊಳಿಸುವ ಕಾರ್ಯಚರಣೆ ಮಾಡಿರುವುದು ಮತ್ತು ನ್ಯಾಯ ಕೇಳಲು  ಮುಂದಾದ ಸಂಘಟನೆ ಕಾರ್ಯಕರ್ತರು ಹಾಗೂ ಸ್ಲಂ ನಿವಾಸಿಗಳನ್ನು ಬಂಧಿಸಿರುವುದನ್ನು ಇಡೀ ರಾಜ್ಯದ ಕೊಳಗೇರಿ ನಿವಾಸಿಗಳು ಖಂಡಿಸಿದ್ದಾರೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಸ್ಲಂ ನಿವಾಸಿಗಳನ್ನು ಬಂಧಿಸಿರುವುದನ್ನು ಇಡೀ ರಾಜ್ಯದ ಕೊಳಗೇರಿ ನಿವಾಸಿಗಳು ಖಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರ ಕೂಡಲೇ ಕೊಳಗೇರಿ ನಿವಾಸಿಗಳು ವಾಸಿಸುತ್ತಿರುವ ಜಾಗವನ್ನು ಡೀನೋಟಿಪೈ ಮಾಡಿ ಕೊಳಗೇರಿ ನಿವಾಸಿಗಳು ಸದರಿ ಜಾಗದಲ್ಲೇ ಬದುಕಲು ಅನುಕೂಲ ಕಲ್ಪಿಸಿಕೊಡಬೇಕೆಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ  ಎ. ನರಸಿಂಹಮೂರ್ತಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಬೆಂಗಳೂರು ಘಟನೆ ಖಂಡಿಸಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತಾರಕ್ಷಣಾ ಸಮಿತಿಯು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಮನವಿ ಸಲ್ಲಿಸಿತು. ಸಮಿತಿ ಪದಾಧಿಕಾರಿಗಳಾದ ಶೆಟ್ಟಳಯ್ಯ, ಕಣ್ಣನ್, ಅಟ್ಟೇಕರ್, ಕಾಶಿರಾಜ್, ಮುರುಗ, ರಾಮಯ್ಯ, ಅರುಣ್, ಗೋವಿಂದಮ್ಮ, ಲತಾ ಮತ್ತು ಚಕ್ರಪಾಣಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement