ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಹಣ ಪಾವತಿಸಿ
ತುಮಕೂರು: ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಮ್ಯಾಚಿಂಗ್ ಗ್ರ್ಯಾಂಟ್ನ ಹಣವನ್ನು ಕೂಡಲೆ ಪಾವತಿಸಬೇಕೆಂದು ಆಲ್ ಇಂಡಿಯಾ ಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ದ ತುಮಕೂರು ಜಿಲ್ಲಾ ಸಮಿತಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಒತ್ತಾಯಿಸಿದೆ. ಮೊದಲನೆ ಕಂತಿನಲ್ಲಿ ಪ್ರತಿ ಆಶಾ ಕಾರ್ಯಕರ್ತೆಗೆ ನವಂಬರ್ 2013 ರಿಂದ ಮಾರ್ಚ್ 2014 ವರೆಗಿನ ಪ್ರಯಾಣಭತ್ಯೆ ಪ್ರತಿ ತಿಂಗಳಿಗೆ 200 ರು. ರಂತೆ (5 ತಿಂಗಳಿಗೆ) 1 ಸಾವಿರ ರು.ಗಳನ್ನು ಮತ್ತು ಪಿ.ಎಚ್.ಸಿ ಮೀಟಿಂಗ್, ವಿಎಚ್ಸಿ ಮೀಟಿಂಗ್ ಮತ್ತು ವಿಎಚ್ಎನ್ಡಿ ಮೀಟಿಂಗ್ಗಳ ಪ್ರೋತ್ಸಾಹಧನ 1900 ರು. ಸೇರಿದಂತೆ 2900 ರು. ಅನ್ನು ಈ ಕೂಡಲೇ ಪಾವತಿಸಬೇಕೆಂದು ಮೇಲಿನ ಆದೇಶದಲ್ಲಿ ತಿಳಿಸಲಾಗಿದೆ. ಕೇವಲ 4 ಕಾಪೊಂನೆಂಟ್ಗಳ ಹಣವನ್ನು ಮಾತ್ರ ಬಿಡುಗಡೆ ಕಾರ್ಯಕರ್ತೆಯರ ಕುಟುಂಬಗಳನ್ನು ಇನ್ನಷ್ಟು ಆರ್ಥಿಕ ಸಂಕಟಕ್ಕೆ ದೂಡಿದೆ ಎಂದು ಖಂಡಿಸಿದೆ.
10ಕ್ಕೆ ಸೌಂದರ್ಯ ಲಹರಿ ಪಠಣ
ತುಮಕೂರು: ಇಲ್ಲಿನ ಶಿವಡಂಗುರ ಧಾರ್ಮಿಕ ಪತ್ರಿಕೆ ಹಾಗೂ ಲಲಿತಾಂಬಿಕಾ ಮಹಿಳಾ ಭಜನಾ ಮಂಡಳಿಯಿಂದ ಜೂ.10 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದ ರಂಗತಾಲೀಮು ಸಭಾಂಗಣದಲ್ಲಿ ಲಲಿತಾ ಸಹಸ್ರನಾಮ ಸೌಂದರ್ಯಲಹರಿ ಮತ್ತು ಪೂಜಾ ಪಠಣ ಏರ್ಪಡಿಸಲಾಗಿದೆ. ಸಾನಿಧ್ಯವನ್ನು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾರದ ವೀರಬಸವ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ನಗರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಮಹೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಹಾಂತಪ್ಪ, ಎಸ್. ನಾರಾಯಣ್, ನಿಶ್ಚಲ್ ಯು, ಟಿ.ಆರ್. ಸದಾಶಿವಯ್ಯ, ಡಾ. ಇಂತಿಯಾಜ್ ಅಹಮದ್ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಚಂದ್ರಶೇಖರ್, ಡಾ. ಗಿರೀಶ್ ಎ.ಎಸ್, ಎಂ.ಎನ್. ಸದಾಶಿವಯ್ಯ, ಎಂ. ರಾಮಯ್ಯ, ರೇವಣಸಿದ್ದಯ್ಯ, ಚನ್ನಬಸವಯ್ಯ, ಎಚ್.ಡಿ. ಮುನಿದಾದಲಯ್ಯ, ವೆಂಕಟೇಶ್, ಟಿ.ಎಂ. ವೆಂಕಟಾಚಲಯ್ಯ, ಪಿ.ಜಿ. ಕುಮಾರಸ್ವಾಮಿ, ಡಿ.ಆರ್. ರಾಮಚಂದ್ರಯ್ಯ, ಸುರೇಶ್ ಬಾಬು ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.