ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಿಪಟೂರಿನಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ

Rashmi Kasaragodu
Updated On : 8 Jun 2014, 2:18 am

ತಿಪಟೂರು: ಪಟ್ಟಣದ ಶಿವಲಿಂಗೇಶ್ವರ ಬೇಕರಿಯಲ್ಲಿ ನಂದಿನಿ ವಿಶ್ವಹಾಲು ದಿನದ ಅಂಗವಾಗಿ ನಂದಿನಿ ಸಿಹಿ  ಉತ್ಸವಕ್ಕೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಎಪಿಎಂಸಿ ಅಧ್ಯಕ್ಷ ಎಂ.ಕೆ.ಪ್ರಕಾಶ್ ಚಾಲನೆ ನೀಡಿದರು.  ಈ ವೇಳೆ ಮಾತನಾಡಿದ ಎಂ.ಕೆ. ಪ್ರಕಾಶ್ ತಾಲೂಕಿನಲ್ಲಿ ಒಟ್ಟು 112 ಸಂಘಗಳಿದ್ದು, ಪ್ರತಿದಿನ ಒಟ್ಟು 48000 ಲೀಟರ್ ಹಾಗೂ ಜಿಲ್ಲೆಯಲ್ಲಿ 1018 ಸಂಘಗಳಿಂದ 5,00,000 ಲೀಟರ್ ಹಾಲು ಶೇಖರಣೆಯಾಗುತ್ತಿದೆ. ತಿಪಟೂರಿನಲ್ಲಿ ಒಂದು ದಿನಕ್ಕೆ 8000ಲೀ ಹಾಲು, 1500 ಲೀ. ಮೊಸರು ಮತ್ತು ಉತ್ಪನ್ನಗಳು ಅಲ್ಲದೆ ತುಮಕೂರು ಜಿಲ್ಲೆಯಲ್ಲಿ 2,40,000 ಲೀ. ಹಾಲು, 50,000ಲೀ ಮೊಸರು ಮಾರಾಟವಾಗುತ್ತಿದೆ. ತಿಪಟೂರು ಹೊಸ ಎಪಿಎಂಸಿ ಯಾರ್ಡ್‌ನಲ್ಲಿ ದಿನದ 24ಗಂಟೆ ಹಾಲು ಮತ್ತು ಹಾಲಿನ ಉತ್ಪನ್ನ ದೊರೆಯುವಂತೆ ಮಳಿಗೆ ಸ್ಥಾಪನೆ ಮತ್ತು ಗ್ರಾಹಕರ ಮನೆ ಬಾಗಿಲಿಗೆ ಹಾಲು ಸಿಗುವಂತೆ ಪಟ್ಟಣದ ತುಂಬಾ ಓಡಾಡುವ ಮತ್ತು ಕರೆ ಮಾಡಿದರೆ ಬಂದು ಹಾಲನ್ನು ನೀಡುವ ಮೊಬೈಲ್ ವಾಹನ ತರುವ ಯೋಜನೆ ಕೈಗೊಳ್ಳಲಾಗುವುದು. ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಹಾಲುಗಳಿಗಿಂತ ಆರೋಗ್ಯಕರ ಹಾಲು ನಂದಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.


ಮಹಿಳಾ ಸಿಬ್ಬಂದಿ ನಿರ್ಲಕ್ಷ್ಯ ಉದ್ದೇಶಪೂರ್ವಕವಲ್ಲ: ಅನೀಸ್ ಖೈಸರ್


ಚಿಕ್ಕನಾಯಕನಹಳ್ಳಿ:  ನಮ್ಮ ಕಚೇರಿ ಮಹಿಳಾ ಸಿಬ್ಬಂದಿಯ ನಿರ್ಲಕ್ಷ ಕುರಿತ ವರದಿ ಉದ್ದೇಶ ಪೂರ್ವಕ ನಿರ್ಲಕ್ಷವಲ್ಲ ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಅನೀಸ್ ಖೈಸರ್ ಸ್ಪಷ್ಟೀಕರಣ ನೀಡಿದ್ದಾರೆ.  ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಹಾಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಯ  ಸ್ಥಳಾವಕಾಶ ಸೂಕ್ತವಾಗಿರುವುದಿಲ್ಲ. ನಮ್ಮ ಇಲಾಖೆಯ ಸಿಬ್ಬಂದಿಗೆ ಸುಸೂತ್ರವಾಗಿ ಕಾರ್ಯನಿರ್ವಹಿಸಲು ಅನುಕೂಲಕರವಾಗಿ ಇರುವುದಿಲ್ಲ. ಇನ್ನು ಗ್ರಾಮೀಣ ಭಾಗದ ನಮ್ಮ ಅಂಗನವಾಡಿ ಕಾರ್ಯಕರ್ತೆಯರು ತಿಂಗಳ ಸಭೆಗಳಿಗೆ ಒಟ್ಟಾಗಿ ಕರೆಯುವುದಕ್ಕೂ ಸ್ಥಳಾವಕಾಶವಿಲ್ಲದ ಕಾರಣಕ್ಕಾಗಿ, ಸಭೆಯನ್ನು ಹಂತಹಂತವಾಗಿ ಹಮ್ಮಿಕೊಳ್ಳುತ್ತಿದ್ದೇವೆ.ಆದರೆ ಪಟ್ಟಣದಲ್ಲಿ ಕಚೇರಿಯನ್ನು ಸೂಕ್ತಸ್ಥಳಾವಕಾಶವಿರುವ ಕಟ್ಟಡಕ್ಕೆ ವರ್ಗಾಯಿಸಲು ಕಟ್ಟಡದ ಲಭ್ಯತೆಯಿಲ್ಲದ ಕಾರಣಕ್ಕಾಗಿ ಇರುವ ಕಟ್ಟಡದಲ್ಲೇ ಅನಿವಾರ್ಯವಾಗಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯೊದಗಿದೆ. ಆದ್ದರಿಂದ ಸೂಕ್ತಸ್ಥಳವಕಾಶ ದೊರೆತ ಕೂಡಲೇ ಕಚೇರಿಯ ಸ್ಥಳಾಂತರ ನಿಶ್ಚಿತ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement