ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಶ್ವ ಪರಿಸರ ದಿನಾಚರಣೆ

Rashmi Kasaragodu
Updated On : 8 Jun 2014, 2:18 am

ತುಮಕೂರು: ಇಲ್ಲಿನ ತುಮಕೂರು ವಿಜ್ಞಾನ ಕೇಂದ್ರದ ವತಿಯಿಂದ ಬಾಲಭವನದಲ್ಲಿ ಪರಿಸರ ದಿನ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಚಿತ್ರಗಳನ್ನು ಮಕ್ಕಳು ಬಿಡಿಸಿದರು. ಪರಿಸರ ಉಳಿವಿಗಾಗಿ ನಿಮ್ಮ ಧ್ವನಿ ಏರಿಸಿ, ಆದರೆ ಸಮುದ್ರ ಮಟ್ಟ ಏರಿಕೆಗೆ ಅಲ್ಲ ಎನ್ನುವ ಘೋಷಣೆ ಮೊಳಗಿಸಿ ಅದೇ ಘೋಷಣೆ ಕುರಿತು  ಚಿತ್ರಗಳನ್ನು ಬಿಡಿಸಿದರು. ಈ ಸಂಬಂಧ ನಡೆದ ಸ್ಪರ್ಧೆಯಲ್ಲಿ ನಗರದ 30 ಕ್ಕೂ ಹೆಚ್ಚು ಶಾಲೆಗಳ 410 ಮಕ್ಕಳು ಪರಿಸರ ಸಂರಕ್ಷಿಸಲು ಹೇಗೆ ಕಾರ್ಯಪ್ರವೃತ್ತರಾಗಬೇಕು ಎನ್ನುವುದರ ಬಗ್ಗೆ ಚಿತ್ರ ಬಿಡಿಸಿದರು. ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಬಿ. ಮರುಳಯ್ಯ ಮಾತನಾಡಿ ಮಕ್ಕಳು ಪರಿಸರ ಉಳಿಸುವ ಪ್ರವೃತ್ತಿ ರೂಢಿಸಿಕೊಳ್ಳಲು ಕರೆ ನೀಡಿದರು. ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಟರಾಜು ಚಿತ್ರ ಬರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪರಿಸರ ಅಧಿಕಾರಿ ಬಿ.ಎಸ್. ಮುರಳೀಧರ್ ಮತ್ತು ಉಪಪರಿಸರ ಅಧಿಕಾರಿ ವಿ. ರಮೇಶ್ ಮತ್ತು ಸಿಬ್ಬಂದಿ ವರ್ಗ, ಪಿ. ಪ್ರಸಾದ್ ಮುಂತಾದವರು ಇದ್ದರು.


ವೈ.ಎಸ್.ಸದಾಶಿವಯ್ಯಗೆ ಶ್ರದ್ಧಾಂಜಲಿ


ಕೊರಟಗೆರೆ: ಇತ್ತೀಚೆಗೆ ನಿಧನರಾದ ಸಮಾಜ ಸೇವಕ, ಹೋಟಲ್ ಉದ್ಯಮಿ ಹಾಗು ಪುರಸಭಾ ಮಾಜಿ ಅಧ್ಯಕ್ಷ ವೈ.ಎಸ್.ಸದಾಶಿವಯ್ಯನವರಿಗೆ ಪಟ್ಟಣದ ವೀರಶೈವ ಸಮಾಜ ಮತ್ತು ಮುಖಂಡರಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಪಟ್ಟಣದ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಹಿರಿಯ ಮುಖಂಡ ವಿಶ್ವೇಶ್ವರಯ್ಯ ವೈ.ಎಸ್. ಸದಾಶಿವಯ್ಯನವರು ತಮ್ಮ ಪುರಸಭಾ ಅಧ್ಯಕ್ಷರ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸಿದ್ದು ಹಾಗೂ ವೀರಶೈವ ಸಮಾಜದ ಸಂಘಟನೆಯೊಂದಿಗೆ ವಿದ್ಯಾರ್ಥಿ ಶೈಕ್ಷಣಿಕ ಅಭಿವೃದ್ಧಿಗೆ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ನಿವೇಶನ ಪಡೆಯುವಲ್ಲಿ ಯಶಸ್ವಿಯಾಗಿ ಜನಪ್ರಿಯರಾಗಿದ್ದರು. ಅವರ ಅಗಲಿಕೆಯಿಂದ ಸಮಾಜಕ್ಕೆ ನಷ್ಠಉಂಟಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ವೀರಶೈವ ಸಮಾಜದ ಅಧ್ಯಕ್ಷ ಪರ್ವತಯ್ಯ, ಮುಖಂಡರಾದ ಸಂಕೇನಹಳ್ಳಿ ಎಸ್.ಆರ್.ಚಂದ್ರಣ್ಣ, ಚಂದ್ರಶೇಖರಯ್ಯ, ಎಲ್. ರಾಜಣ್ಣ, ಶಿವಣ್ಣ, ಸದಾಶಿವಯ್ಯ, ಮಯೂರ ಗೋವಿಂದರಾಜು, ನರಸಿಂಹಪ್ಪ, ಚಿಕ್ಕರಂಗಯ್ಯ, ಮೈಲಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement