ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಲ್ಲಗಳ ನಡುವೆ ಪಪೂ ಕಾಲೇಜು

Rashmi Kasaragodu
Updated On : 9 Jun 2014, 1:38 am

ಅಣೇಕಟ್ಟೆ ಸಿದ್ದರಾಮಣ್ಣ
ಚಿಕ್ಕನಾಯಕನಹಳ್ಳಿ: ನಲವತ್ತು ವರ್ಷಗಳ ಹಿಂದೆ  ಸರ್ವೋದಯ ಪಥದ ಜಿ.ವಿ.ನಾರಾಯಣಮೂರ್ತಿಯಂತಹ ಶಿಕ್ಷಣ ಪ್ರೇಮಿಗಳಿಂದ ಪ್ರಾರಂಭವಾದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಉಪನ್ಯಾಸಕರು ಮತ್ತು ಇತರೆ ಸೌಲಭ್ಯಗಳ  ಕೊರತೆಯಿಂದ ಸೊರಗುತ್ತಿದೆ.
1973ರಲ್ಲಿ ಪ್ರಾರಂಭವಾದ ರಾಜ್ಯದ ಮೊದಲ ಎರಡು ಸ್ವತಂತ್ರ ಪದವಿ ಪೂರ್ವಕಾಲೇಜುಗಳಲ್ಲಿ ಒಂದಾದ ಕಾಲೇಜು ವಿದ್ಯಾರ್ಥಿಗಳಿದ್ದರು ಉಪನ್ಯಾಸಕರ ಕೊರತೆ ಕಾಡುತಿದೆ. ಶಿಕ್ಷಣ ಭೀಷ್ಮರಾದ ದೇಶೀಯ ವಿದ್ಯಾಪೀಠದ ಮುಖ್ಯಶಿಕ್ಷಕ ಸಿ.ಟಿ. ಈಶ್ವರನ್, ಸಿ.ಕೆ. ಕೃಷ್ಣರಾವ್ ಶಿಕ್ಷಣಾಸಕ್ತರು ಸೇರಿ  40 ವರ್ಷಗಳ ಹಿಂದೆ 1 ಲಕ್ಷ ರು.ಗಳ ಠೇವಣಿ ಮತ್ತು 8 ಎಕರೆ ಸ್ಥಳಾವಕಾಶದ ಸರ್ಕಾರದ ಷರತ್ತುಗಳಿಗೆ ಸಮ್ಮತಿಸಿ ಕಾಲೇಜನ್ನು ಪ್ರಾರಂಭಿಸಿದರು. ಅಂದಿನ ಕಾಲಕ್ಕೇ 50 ಸಾವಿರ ದಾನ ನೀಡಿದ ದಿ.ನಾರಾಯಣಶೆಟ್ಟಿ, ಬ್ರಹ್ಮಪುರಿ ಆಂಜನೇಯ ಸ್ವಾಮಿಯ 8 ಎಕರೆ ಜಮೀನು ದಾನನೀಡಿದ ದೇವಾಲಯ ಆಡಳಿತ ಮಂಡಳಿ, ಮರಕ್ಕೊಂದು ತೆಂಗಿನಕಾಯಿ ಕೊಟ್ಟು ಸರ್ಕಾರಕ್ಕೆ ಕಟ್ಟಬೇಕಾಗಿದ್ದ 1ಲಕ್ಷ ರು.ಗಳನ್ನು ಒಟ್ಟುಗೂಡಿಸಿ ತಂದ ಕಾಲೇಜಿನ ಸ್ಥಿತಿ ಇಂದು ಸೌಲಭ್ಯಗಳ ಕೊರತೆಯಿಂದ ಕ್ಷೀಣಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement