ನೀರು ಹರಿಯಲು ವ್ಯವಸ್ಥೆ ಮಾಡಿ
ಕುಣಿಗಲ್ ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯಭಾಗದಲ್ಲಿ ರೈಲ್ವೆ ಹಳಿ ಕಾಮಗಾರಿಗಾಗಿ ಸೇತುವೆ ನಿರ್ಮಿಸಿದ್ದು, ಇದರ ಕೆಳಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಮರ್ಪಕ ವ್ಯವಸ್ಥೆ ಮಾಡದ ಕಾರಣ ಸ್ವಲ್ಪ ಮಳೆ ಬಂದರೂ ಸಾರ್ವಜನಿಕರು ಪರದಾಡುವಂತಾಗಿದೆ.
ತಾಲೂಕಿನ ಬಿಳೇದೇವಾಲಯ ಪಂಚಾಯಿತಿ ವ್ಯಾಪ್ತಿಯ ಹಳೇ ರಾಷ್ಟ್ರೀಯ ಹೆದ್ದಾರಿ 48ರ ನಡೇಮಾವಿನಪುರ ಅಣೆಯ ಮೂಲಕ ಉರ್ಕೆಹಳ್ಳಿ ಸೇರಿದಂತೆ ಮುಂದಿನ ಭಾಗಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ರೈಲ್ವೆ ಹಳಿ ನಿರ್ಮಾಣಕ್ಕೆ ಕಾಮಗಾರಿ ನಡೆದಿದೆ. ಈ ಕಾಮಗಾರಿಯಡಿ ತೊರೆಪಕ್ಕವೆ ಮೇಲು ಸೇತುವೆ ನಿರ್ಮಿಸಿದ್ದು ಸೇತುವೆ ಕಳೆಭಾಗದಲ್ಲಿ ಮಳೆನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸದ ಕಾರಣ ಸ್ವಲ್ಪ ಮಳೆ ಬಂದರೂ ರಸ್ತೆಯಲ್ಲಿ ಮತ್ತು ಸೇತುವೆ ಕೆಳಗೆ ಮಂಡಿಉದ್ದ ನೀರು ನಿಂತು ಗ್ರಾಮಸ್ಥರು ಪರದಾಡುವಂತಾಗಿದೆ.
ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖಾಧಿಕಾರಿ ಮತ್ತು ಸೇತುವೆ ಕಾಮಗಾರಿ ಕೈಗೊಂಡವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಮಳೆಗಾಲ ಪ್ರಾರಂಭವಾಗುತ್ತಿದ್ದು ಗ್ರಾಮಸ್ಥರಿಗೆ ಅನಾನುಕೂಲ ತಪ್ಪಿಸುವ ನಿಟ್ಟಿನಲ್ಲಿ ಸಾಶ್ವತ ಕ್ರಮ ಕೈಗೊಂಡು ಸಮಸ್ಯೆ ನಿವಾರಿಸಿ.
ಗಂಗಯ್ಯ, ರಾಮಯ್ಯ, ಕೃಷ್ಣಪ್ಪ, ಗೌರಮ್ಮ, ವೆಂಕಟೇಶ್, ಸುರೇಶ್.