ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗ್ರಾಪಂ ಸದಸ್ಯರು ಜೆಡಿಎಸ್ಗೆ

Rashmi Kasaragodu
Updated On : 10 Jun 2014, 1:06 am

ಹುಳಿಯಾರು: ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಲಿದ್ದು, ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿಯಲ್ಲಿ ಗುರ್ತಿಸಿಕೊಂಡಿದ್ದ ಮೂರು ಸದಸ್ಯರು ಜೆಡಿಎಸ್ಗೆ ಸೇರ್ಪಡೆಗೊಂಡಿದ್ದಾರೆ.
ವನ್ನೆಯಷ್ಟೇ ಗ್ರಾಪಂ ಅಧ್ಯಕ್ಷೆ ಪುಟ್ಟಿಬಾಯಿ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸಿ, 33 ಸದಸ್ಯರಿರುವ ಪಂಚಾಯ್ತಿಯಲ್ಲಿ 21 ಜೆಡಿಎಸ್, 4 ಕಾಂಗ್ರೆಸ್ ಹಾಗೂ ಒಬ್ಬ ಪಕ್ಷೇತರ ಸದಸ್ಯ ಇದ್ದರೆ ಅಧ್ಯಕ್ಷರನ್ನು ಹೊರತು ಪಡಿಸಿ ಉಳಿದ 6 ಮಂದಿ ಬಜೆಪಿ ಸದಸ್ಯರು ಗೈರುಹಾಜರಾಗಿದ್ದರು.


ಗ್ರಾಪಂ ಅಧ್ಯಕ್ಷ ಚುನಾವಣೆ 12ಕ್ಕೆ
ಹುಳಿಯಾರು:  ಗ್ರಾಪಂ ಅಧ್ಯಕ್ಷರ ಆಯ್ಕೆಗಾಗಿ 12 ರ ಗುರುವಾರ ಬೆಳಿಗ್ಗೆ 12 ಗಂಟೆಗೆ ಚುನಾವಣೆ ನಡೆಯಲಿದೆ.
ಅಧ್ಯಕ್ಷರ ಸ್ಥಾನ ಅನುಸೂಚಿತ ಜಾತಿ ವರ್ಗಕ್ಕೆ ಮೀಸಲಾಗಿದ್ದು ಅರ್ಹ ಸದಸ್ಯರು ಗುರುವಾರ 10 ಗಂಟೆ ಒಳಗಾಗಿ ನಾಮಪತ್ರ ಸಲ್ಲಿಸಬಹುದಾಗಿದೆ. ಈ ಹಿಂದೆ ಅಧ್ಯಕ್ಷೆಯಾಗಿದ್ದ ಪುಟ್ಟಿಬಾಯಿ ವಿರುದ್ಧ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸದಸ್ಯರು ಅವಿಶ್ವಾಸ ತಂದು ಪದಚ್ಯುತಿಗೊಳಿಸಿದ್ದರಿಂದ ತೆರವಾದ ಸ್ಥಾನಕ್ಕೆ   ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಕಾಮಾಕ್ಷಮ್ಮ ತಿಳಿಸಿದ್ದಾರೆ.


ಕಾಮಗಾರಿ ಮಾಡದೆ ಬಿಲ್ ಪಾವತಿ: ದೂರು
ಹುಳಿಯಾರು: ಹೋಬಳಿಯ ಹೊಯ್ಸಳಕಟ್ಟೆ ಗ್ರಾಪಂ ವ್ಯಾಪ್ತಿಯ ಲಕ್ಕೇನಹಳ್ಳಿ ಗ್ರಾಮದಲ್ಲಿ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆದಿದೆ ಎಂದು ಗ್ರಾಪಂ ಸದಸ್ಯ ಕೆ. ರಘು ದೂರಿದ್ದಾರೆ.
2013-14 ನೇ ಸಾಲಿನ ಖಾತ್ರಿ ಯೋಜನೆಯಡಿ  ಸರ್ಕಾರಿ ಸರ್ವೇ ನಂ.35 ರಲ್ಲಿ ತಂಗಿನ ತೋಟಕ್ಕೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸಿಕೊಳ್ಳಲಾಗಿದೆ.
 ಆದರೆ ಚೆಕ್ ಡ್ಯಾಂ ನಿರ್ಮಾಣ ಮಾಡದೆಯೇ ಸುಳ್ಳು ದಾಖಲೆ ನೀಡಿ ಸುಮಾರು ರು. 63ಸಾವಿರ ಹಣ ಪಡೆದು ವಂಚಿಸಲಾಗಿದೆ. ಪ್ರಕರಣದ ಬಗ್ಗೆ ದೂರು ಸಲ್ಲಿಸುತ್ತಿದ್ದಂತೆ ವಿಷಯ ತಿಳಿದು ತರಾತುರಿಯಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಈ ಬಗ್ಗೆ ತಾಪಂ ಇಒ ಅವರಿಗೆ ದೂರು ನೀಡಲಾಗಿದ್ದು ಈಗಾಗಲೇ ತಾಪಂ ಕಡತದಲ್ಲೂ ದಾಖಲೆ ನಾಶಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.



ಪರಿಸರ ರಕ್ಷಣೆಯಿಂದ ಜೀವ ಸಂಕುಲ ಉಳಿಕೆ
ತಿಪಟೂರು: ಜಾಗತೀಕರಣದಿಂದ ಪರಿಸರ ನಾಶವಾಗುತ್ತಿದ್ದು, ಪರಿಸರ ರಕ್ಷಣೆಯಿಂದ ಮಾತ್ರ ಜೀವ ಸಂಕುಲ ಉಳಿಸಲು ಸಾಧ್ಯ ಎಂದು ಶಿಕ್ಷಕರಾದ ಕೆ.ಎಂ.ಪರಮೇಶ್ವರಯ್ಯ ತಿಳಿಸಿದರು.
ತಾಲೂಕಿನ ರಂಗಾಪುರ ಶ್ರೀ ಪರದೇಶಿಕೇಂದ್ರ ಕಿರಿಯ ಕಾಲೇಜು ಹಾಗೂ ಪ್ರೌಢಶಾಲೆಯ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, “®ÚÂÑÚÁÚ ಸ್ವಚ್ಛತೆ ನಮ್ಮೆಲ್ಲರ ಹೊಣೆ. ಭವಿಷ್ಯದಲ್ಲಿ ಜಾಗತಿಕ ತಾಪಮಾನದಿಂದ ಧ್ರು ಪ್ರದೇಶಗಳ ಹಿಮಕರಗಿ ಸಮುದ್ರಮಟ್ಟ ಹೆಚ್ಚಳವಾಗಿ ಹಲವಾರು ದ್ವೀಪಗಳು ಮುಳುಗುವ ÑÚMºÚÈÚÉ¥æ’ ಎಂದು ಎಚ್ಚರಿಸಿದರು. ಶಿಕ್ಷಕರಾದ ಎಲ್.ನೀಲಕಂಠಯ್ಯ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement