ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪೊಲೀಸರ ನಿರ್ಲಕ್ಷ್ಯ ಆರೋಪಿಸಿ ಧರಣಿ

Rashmi Kasaragodu
Updated On : 10 Jun 2014, 1:05 am

ಕುಣಿಗಲ್: ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಯುವಕನನ್ನು ಕೂಲೆ ಮಾಡಲಾಗಿದೆ ಎಂದು ಆರೋಪಿಸಿದ ಆತನ ಕುಟುಂಬ ತನಿಖೆಗೆ ಆಗ್ರಹಿಸಿ  ಪೊಲೀಸರು ಪ್ರಕರಣ ದಾಖಲಿಸದೆ ಕರ್ತವ್ಯ ಲೋಪ ಎಸಗುತ್ತಿದ್ದಾರೆಂದು ಆರೋಪಿಸಿ ಶಾಸಕ ಡಿ. ನಾಗರಾಜಯ್ಯ ಪ್ರತಿಭಟನೆ ನಡೆಸಿದರು.
ಬೈಪಾಸ್ ರಸ್ತೆಯ ಸಿ. ಟಿಪಾಳ್ಯ ಗೇಟ್ ಬಳಿ ಶ್ರೀನಿವಾಸಮೂರ್ತಿ(23)ಅಪಘಾತದಲ್ಲಿ ಮೃತಪಟ್ಟಿದ್ದು, ಮದ್ಯಪಾನ ಮಾಡಿ ವಾಹನ ಚಾಲನೆಮಾಡಿ ಸ್ವಯಂ ಅಪಘಾತದಲ್ಲಿ ಮೃತಪಟ್ಟಿದ್ದಾನೆಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದನ್ನು ಖಂಡಿಸಿ ಸಾರ್ವಜನಿಕ ಆಸ್ಪತ್ರೆ ಮುಂದೆ ಸಂಬಂಧಿಕರು, ಗ್ರಾಮಸ್ಥರು ಧರಣಿ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ದೂರು ನೀಡಿದರೆ ಕ್ರಮ ಕೈಗೊಳ್ಳುವ ಭರವಸೆಯನ್ನು ಡಿವೈಎಸ್ಪಿ ನೀಡಿದ್ದರಿಂದ ಮೃತದೇಹದ ಮರಣೋತ್ತರ ಪರೀಕ್ಷೆಗೆ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿತ್ತು.
ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ, ಶವವನ್ನು ರಾತ್ರಿ ಎಂಟುಗಂಟೆಗೆ ಪಟ್ಟಣಕ್ಕೆ ತಂದ ಸಂಬಂಧಿಕರು, ಕೊಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಠಾಣೆ ಮುಂಭಾಗದಲ್ಲಿ  ಧರಣಿ ಪ್ರಾರಂಭಿಸಿದರು. ಡಿವೈಎಸ್ಪಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ, ಪೊಲೀಸರು ಪ್ರಕರಣ ಸಮರ್ಪಕವಾಗಿ ನಡೆಸುತ್ತಿಲ್ಲವೆಂದು ಆರೋಪಿಸಿ, ಸಮೀಪದ ತಹಸೀಲ್ದಾರ್ ಕಚೇರಿ ಮುಂದೆ ಶವ ಇಟ್ಟು ಧರಣಿಗೆ ಮುಂದಾದರು. ಸ್ಥಳಕ್ಕೆ ಶಾಸಕ ಡಿ. ನಾಗರಾಜಯ್ಯ, ಪುರಸಭೆ ಅಧ್ಯಕ್ಷ ಕೆ.ಎಲ್. ಹರೀಶ್, ಜಿಪಂ ಪ್ರಬಾರ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಧರಣಿಯಲ್ಲಿ ಪಾಲ್ಗೊಂಡರು.
ಡಿವೈಎಸ್ಪಿ ಗಣೇಶ್, ತಹಸೀಲ್ದಾರ್ ಶಂಭುಲಿಗಂಯ್ಯ, ಶಾಸಕರ ಮನವೊಲಿಸಲು ಯತ್ನಿಸಿದರು. ಆದರೆ ಶಾಸಕರು ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಆಗಮಿಸುವಂತೆ ಪಟ್ಟು ಹಿಡಿದರಲ್ಲದೆ ಅಪಘಾತ ಪ್ರಕರಣ ದಾಖಲಿಸುವಾಗ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಿಪಿಐ ಅವರೊಂದಿಗೆ ವಾಗ್ವಾದ ನಡೆಸಿದರು. ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಬೆಂಗಳೂರಿನ ಅಸ್ಪತ್ರೆಯಲ್ಲಿ ನಡೆಸುವುದು, ಪ್ರಕರಣದ ತನಿಖಾಧಿಕಾರಿ ಬದಲಾಯಿಸುವ ಭರವಸೆ ನೀಡಿದ ನಂತರ ಶಾಸಕರು ಪ್ರತಿಭಟನೆ ಅಂತ್ಯಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement