ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮತ್ತೊಂದು ಜೋಡಿ ರಸ್ತೆ

Rashmi Kasaragodu
Updated On : 10 Jun 2014, 1:06 am

ಉಗಮ ಶ್ರೀನಿವಾಸ್
ತುಮಕೂರು: ದಿನೇ ದಿನೇ ಬೆಳೆಯುತ್ತಲೇ ಇರುವ ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರಿನಲ್ಲಿ ಮತ್ತೊಂದು ಜೋಡಿ ರಸ್ತೆ ನಿರ್ಮಾಣವಾಗಲಿದೆ.
ಭದ್ರಮ್ಮ ಛತ್ರ ವೃತ್ತದಿಂದ ಮೊದಲ ಹಂತದಲ್ಲಿ ಉಪ್ಪಾರಹಳ್ಳಿ ಮೇಲುಸೇತುವೆ ಆರಂಭವಾಗುವ ತನಕ. ಬಳಿಕ ಶೆಟ್ಟಿಹಳ್ಳಿಗೇಟ್ವರೆಗೆ ಈ ಜೋಡಿ ರಸ್ತೆ ನಿರ್ಮಾಣವಾಗಲಿದೆ. ರು. 11 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರಸ್ತೆಗೆ ಈಗಾಗಲೇ ಯೋಜನೆ ಸಿದ್ಧವಾಗಿದೆ.ಇದೇ ತಿಂಗಳ ಕೊನೆಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಶೆಟ್ಟಿಹಳ್ಳಿ, ಮಾರುತಿ ನಗರ, ಜಯನಗರ ಮುಂತಾದ ಬಡಾವಣೆಗಳಿಗೆ ಹೋಗಲು ಇದೇ ರಸ್ತೆಯನ್ನು ಅವಲಂಬಿಸಬೇಕು.
ಪ್ರತಿ ದಿನ ಸಾವಿರಾರು ವಾಹನಗಳು ನಿರಂತರವಾಗಿ ಓಡಾಡುತ್ತಲೇ ಇರುತ್ತದೆ. ಭದ್ರಮ್ಮ ಛತ್ರದ ಬಳಿ ಸಿಗ್ನಲ್ ಲೈಟ್ ಅಳವಡಿಸಿದ್ದರೂ ವಾಹನ ದಟ್ಟಣೆ ಕಡಿಮೆಯಾಗುತ್ತಿಲ್ಲ. ಹಾಲಿ ಇರುವ ಸಿಂಗಲ್ ರಸ್ತೆಯಲ್ಲಿ ಪಾದಚಾರಿಗಳು ರಸ್ತೆ ದಾಟುವುದು ದುಸ್ಸಾಹಸವಾಗಿದೆ. ಅಲ್ಲದೇ ಪ್ರತಿ ದಿನ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಲೇ ಇದೆ. ಮುಖ್ಯವಾಗಿ ಈ ಮಾರ್ಗದಲ್ಲಿ ನಗರಸಾರಿಗೆ ಬಸ್ ಗಳು ನಿರಂತರವಾಗಿ ಓಡಾಡುತ್ತಲೇ ಇರುತ್ತದೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಭದ್ರಮ್ಮ ಛತ್ರದಿಂದ ಶೆಟ್ಟಿಹಳ್ಳಿ ಗೇಟ್ವರೆಗೆ ಜೋಡಿ ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಈಗ ಯೋಜನೆಗೆ ಅಂತಿಮ ರೂಪ ಬಂದಿದ್ದು ಶೀಘ್ರವೇ ಕಾಮಗಾರಿ ಆರಂಭಿಸುವ ಉತ್ಸುಕತೆಯಲ್ಲಿ ನಗರಪಾಲಿಕೆ ಇದೆ.
ಶೆಟ್ಟಿಹಳ್ಳಿ ಮೂಲಕ ತುಮಕೂರು ದಕ್ಷಿಣ ಭಾಗದಲ್ಲಿ ಮನೆಗಳು ದೊಡ್ಡ ಮಟ್ಟದಲ್ಲಿ ತಲೆ ಎತ್ತುತ್ತಿವೆ. ಅಲ್ಲದೇ ತುಮಕೂರು ನಗರದ ಅರ್ಧದಷ್ಟು ಭಾಗ ಜನ ತುಮಕೂರು ದಕ್ಷಿಣ ಭಾಗದಲ್ಲಿ ಇದ್ದಾರೆ. ಭದ್ರಮ್ಮ ಛತ್ರದ ಮೂಲಕ ಬಸ್ನಿಲ್ದಾಣ, ಸರ್ಕಾರಿ ಕಚೇರಿಗಳಿಗೆ ಪ್ರತಿ ದಿನ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತವೆ. ಹೀಗಾಗಿ ಜೋಡಿ ರಸ್ತೆ ಬೇಕೆಂಬ ಬೇಡಿಕೆ ಬಹು ದಿನಗಳಿಂದಲೂ ಇತ್ತು. ನಾಗರಿಕರ ಮನವಿಗೆ ಸ್ಪಂದಿಸಿರುವ ಶಾಸಕರು ಹಾಗೂ ಪಾಲಿಕೆ ಕಡೆಗೂ ರಸ್ತೆ ನಿರ್ಮಾಣಕ್ಕೆ ಕೈ ಹಾಕಲಿದೆ.
ಈಗಾಗಲೇ ಉಪ್ಪಾರಹಳ್ಳಿ ಮೇಲ್ ಸೇತುವೆ ಓಡಾಟಕ್ಕೆ ಮುಕ್ತವಾಗಿದೆ. ಶೆಟ್ಟಿಹಳ್ಳಿ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಇನ್ನು ಭದ್ರಮ್ಮ ವೃತ್ತದಿಂದ ಶೆಟ್ಟಿಹಳ್ಳಿ ಗೇಟ್ವರೆಗೆ ಜೋಡಿ ರಸ್ತೆ ನಿರ್ಮಾಣವಾದರೆ ಅಲ್ಲಿಂದ ಹೇಗೂ ಜೋಡಿ ರಸ್ತೆ.  ಹೀಗಾಗಿ ಸದ್ಯದ ಮಟ್ಟಿಗೆ ಟ್ರಾಫಿಕ್ ಸಮಸ್ಯೆ ನೀಗಿಸಬಹುದು ಎಂಬ ಅಂದಾಜಿನಲ್ಲಿ ಪಾಲಿಕೆ ಇದೆ.



ಮೇಲ್ಸೇತುವೆ
ಉದ್ಘಾಟನೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಪ್ಪಾರಹಳ್ಳಿ ಮೇಲ್ಸೇತುವೆಯನ್ನು ತರಾತುರಿಯಾಗಿ ಸಂಚಾರ ಮುಕ್ತಕ್ಕೆ ಅನುವು ಮಾಡಿಕೊಡಲಾಗಿತ್ತು. ಮೇಲ್ಸೇತುವೆ ಮೇಲೆ ಬೀದಿ ದೀಪ ಅಳವಡಿಸಿ ಎಲ್ಲಾ ಅಗತ್ಯ ಸೌಲಭ್ಯ ಕಲ್ಪಿಸಿ ಉದ್ಘಾಟನೆ ಮಾಡುವ ಇರಾದೆಯಲ್ಲಿ ಶಾಸಕರು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement