ನಾಟಕಕ್ಕೆ ಮನ ಪರಿವರ್ತನೆ ಶಕ್ತಿ'
ಮಧುಗಿರಿ: ನಾಟಕಗಳು ಕೇವಲ ಸಾಹಿತ್ಯವಾಗಿ ಉಳಿಯದೇ ಜನ ಮನ ಪರಿವರ್ತಿಸುವ ಶಕ್ತಿ ಸಾಮರ್ಥ್ಯ ಹೊಂದಿವೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ರಂಗ ತಜ್ಞ ಶ್ರೀನಿವಾಸ್ ಕಪ್ಪಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ಮಾಲೀಮರಿಯಪ್ಪ ರಂಗಮಂದಿದರಲ್ಲಿ ರಾಣ್ಯ ಪ್ರಕಾಶನ ಏರ್ಪಡಿಸಿದ್ದ ಪ.ವಿ.ಸುಬ್ರಹ್ಮಣ್ಯ ವಿರಚಿತ ಕರ್ಣ ಪೌರಾಣಿಕ ನಾಟಕ ಪುಸ್ತಕ ಲೋಕಾರ್ಪಣೆ ಮತ್ತು ಮನ್ವಂತರ ಸಂಗೀತ ಸಾಂಸ್ಕೃತಿಕ ವೇದಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಲೆಗೆ ಪ್ರೋತ್ಸಾಹ: ಕರ್ಣ ಕೃತಿ ಮಾನವೀಯ ಮೌಲ್ಯ ಹಾಗೂ ವೈಚಾರಿಕತೆ ಎತ್ತಿ ಹಿಡಿಯುವ ಕೃತಿ, ಇಲ್ಲಿನ ಕಲಾರಂಗ ನಾಟಕೋತ್ಸವ ಏರ್ಪಡಿಸಿ ಕಲೆ ಪ್ರೋತ್ಸಾಹಿಸುತ್ತಾ ಬಂದಿದೆ ಪ.ವಿ.ಸುಬ್ರಹ್ಮಣ್ಯ ಒಬ್ಬ ಕರ್ಣ, ದುರ್ಯೋದನನ್ನು ಜ್ಯಾತ್ಯತೀತವಾಗಿ ಧರ್ಮ ಸಹಿಷ್ಣತೆಯಲ್ಲಿ ಗುಣ ಧರ್ಮಗಳ ಸೌಹಾರ್ದತೆಯೊಂದಿಗೆ ಬಿಂಬಿಸಿರುವುದು ಅವರಲ್ಲಿರುವ ಕೃತಿತ್ವದ ಶಕ್ತಿಗೆ ಸಾಕ್ಷಿ ಎಂದರು.
ಕಿರುತೆರೆ ನಟ, ರಂಗಕರ್ಮಿ ಡಿ.ಬಿ.ಮಲ್ಲಿಕಾರ್ಜುನ, ಮಹಾಮನೆ ಪುಸ್ತಕ ಲೋಕಾರ್ಪಣೆ ಮಾಡಿ , ಪ್ರತಿಭೆಗೆ ಜಾತಿಯ ಸೋಂಕಿಲ್ಲ. ಪಂಪ,ದುರ್ಯೋದನನಿಗಿಂತಲೂ ಪ.ವಿ.ಸುಬ್ರಹ್ಮಣ್ಯ ವಿರಚಿತ ಕರ್ಣ ನಾಟಕ ಜಾತಿ, ಎಲ್ಲೇ ಮೀರಿ ಶಕ್ತಿ ಸಾಮರ್ಥ್ಯ ಪ್ರತಿಭೆಗೆ ಮಣೆ ಹಾಕಿರುವುದನ್ನು ನೋಡಿದರೆ ಇಂದಿನ ಆಧನಿಕ ತಂತ್ರಜ್ಞಾನ ಯುಗದಲ್ಲಿ ಇದೊಂದು ಉತ್ತಮ ಕೃತಿಯಾಗಿ ಮೂಡಿ ಬಂದಿರುವುದರಲ್ಲಿ ಸಂಶಯವಿಲ್ಲ ಎಂದರು.