ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರತಿಯೊಬ್ಬರಲ್ಲೂ ಪರಿಸರ ಪ್ರೀತಿ ಇರಬೇಕು: ಸುಕನ್ಯಾ

Rashmi Kasaragodu
Updated On : 11 Jun 2014, 2:18 am

ತುಮಕೂರು: ಪ್ರತಿಯೊಬ್ಬರಲ್ಲೂ ಪರಿಸರ ಪ್ರೀತಿ ಮೂಡುವಂಥ ವಾತಾವರಣವನ್ನು ಎಲ್ಲರೂ ಸೇರಿ ನಿರ್ಮಿಸಬೇಕೆಂದು ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಆರ್.ಹೆಚ್. ಸುಕನ್ಯಾ ಹೇಳಿದರು.
ನಗರದ ಗೋಕುಲ ಬಡಾವಣೆಯ ರಚನಾ ಮಹಿಳಾ ಸಂಘದ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು, ಬಳಿಕ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪರಿಸರ ಕಲುಷಿತವಾಗುತ್ತಿದೆ. ಇದಕ್ಕೆ ಮನಷ್ಯನೇ ಕಾರಣ. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಒಮ್ಮೆ ಕುಳಿತು ಪರಿಸರದ ಬಗ್ಗೆ ಚರ್ಚೆ ಮಾಡುವಂತಾದಾಗ ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದು ಎಂದರು. ಮಹಿಳೆ ಜಾಗೃತಳಾದಾಗ ಮನೆ ಆರ್ಥಿಕವಾಗಿ ಸ್ವಾವಲಂಬಿಯಾಗುವುದರಲ್ಲಿ ಸುಂದರ ಮನೆಯ ಕನಸು ಸಾಕಾರಗೊಳ್ಳುತ್ತದೆ. ಕುಟುಂಬ ಪ್ರೀತಿಯ ಜೊತೆಗೆ ಪರಿಸರ ಪ್ರೀತಿ ಅಗತ್ಯ ಎಂದರು.
ಜನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಶರ್ಮಿಳಾ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ, ರಚನಾ ಮಹಿಳಾ ಸಮಾಜದ ಲೋಲಾಕ್ಷಿ ಸೇರಿದಂತೆ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬಡಾವಣೆಯಲ್ಲಿ ಸಸಿಗಳನ್ನು ನೆಡಲಾಯಿತು.



ಡೀಸೆಲ್ ಕಳ್ಳರ ದಸ್ತಗಿರಿ
ಚಿಕ್ಕನಾಯಕನಹಳ್ಳಿ: ಪಟ್ಟಣದ ಪೊಲೀಸರು ತಾಲೂಕಿನಲ್ಲಿ ಲಾರಿಗಳ ಡೀಸೆಲ್ ಟ್ಯಾಂಕುಗಳಿಂದ ಕಳವು ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾತ್ರಿ ವೇಳೆ ನಿಲ್ಲಿಸಿದ್ದ ಲಾರಿಗಳ ಟ್ಯಾಂಕರುಗಳಿಂದ ಡೀಸೆಲ್ ಕಳವಾಗುತ್ತಿರುವ ಬಗ್ಗೆ ಸಿ.ಎನ್.ದೇವರಾಜು, ಮಹಮದ್‌ಗೌಸ್ ದೂರು ನೀಡಿದ್ದರು. ಉಪವಿಭಾಗದ ಪೊಲೀಸ್ ಅಧೀಕ್ಷಕ ಕಾರ್ತೀಕರೆಡ್ಡಿ ತಂಡ ರಚಿಸಿಸಿದ್ದರು. ಅರಸೀಕೆರೆ ತಾಲೂಕಿನ ಸೊಪ್ಪನಹಳ್ಳಿ ರಾಜಶೇಖರ , ತಿಪಟೂರು ತಾಲೂಕಿನ ಮಾಯಗೊಂಡನಹಳ್ಳಿ ಚನ್ನಬಸವಯ್ಯ ಮತ್ತು ರಂಗಸ್ವಾಮಿ ಹಾಗು ನಾಗೇಶ ಎಂಬುವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಸಂಬಂಧ 310 ಲೀ. ಡೀಸೆಲ್ ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement