ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸೌಲಭ್ಯ ಪಡೆಯಲು ಸಂಘಟಿತ ಹೋರಾಟ ಅಗತ್ಯ

Rashmi Kasaragodu
Updated On : 11 Jun 2014, 2:18 am

ಹುಳಿಯಾರು: ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಹೋರಾಟ ಅಗತ್ಯ ಎಂದು  ರಾಜ್ಯ ರೈತ ಸಂಘದ ಸಂಚಾಲಕ ಕೆಂಕೆರೆ ಸತೀಶ್ ತಿಳಿಸಿದರು. ಹುಳಿಯಾರಿನ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಬಾಲಾಜಿ ಕ್ಯಾಶ್ ಬಜಾರ್ ಕಟ್ಟಡಲ್ಲಿ ಭಾನುವಾರ ಉದ್ಘಾಟನೆಯಾದ ದೀನದಲಿತರ ಸೇವಾ ಚಾರಿಟಬಲ್ ಟ್ರಸ್ಟ್ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರ ರೂಪಿಸುವ ಯಾವುದೇ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ದೊರೆಯದೇ ಮಧ್ಯವರ್ತಿಗಳ ಕೈಗೆ ಸಿಕ್ಕಿ ಸಂಪೂರ್ಣ ಪ್ರಯೋಜನ ಫಲಾನುಭವಿಗೆ ಲಭಿಸದಂತಾಗಿದೆ. ಅದಕ್ಕಾಗಿ ನಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಹೋರಾಡಿ ಪಡೆಯುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದರು.




ಜಗ್ಗಿರುವ ವಿದ್ಯುತ್ ವೈರ್
ಹುಳಿಯಾರು: ಹೋಬಳಿ ದೊಡ್ಡಬಿದರೆ ಗ್ರಾಮದ ಸಮೀಪದ ಹೆದ್ದಾರಿ ಪಕ್ಕದ ಡಾಕ್ಟರ್ ಗೇಟ್ ಬಳಿಯ ತೋಟದ ಹಾದಿಯಲ್ಲಿ ಎಳೆದಿರುವ ವಿದ್ಯುತ್ ವೈರ್ ಜಗ್ಗಿ ಅಪಾಯದ ಅಂಚಿನಲ್ಲಿದ್ದರೂ ಸಹ ಬೆಸ್ಕಾಂ ಅಧಿಕಾರಿಗಳು ಇತ್ತ ಗಮನಿಸದೆ ಮೌನವಹಿಸಿದ್ದಾರೆ ಎಂದು ಸ್ಥಳಿಯ ಡಿ.ಕೆ.ರಮೇಶ್ ದೂರಿದ್ದಾರೆ. ಹೆದ್ದಾರಿ ಪಕ್ಕದ ಶ್ಯಾನುಭೋಗರ ತೋಟದ ಟಿಸಿಯಿಂದ ಮತ್ತೊಂದು ಕಂಬಕ್ಕೆ ಎಳೆದಿರುವ ವೈರ್ ಕಾಲಕ್ರಮೇಣದಲ್ಲಿ ಕೈಗೆಟಕುವಂತೆ ಜಗ್ಗಿರುವುದಲ್ಲದೆ ಯಾವುದೇ ಕ್ಷಣದಲ್ಲಾದೂ ತುಂಡಾಗಿ ಬೀಳುವ ಸಾಧ್ಯತೆಯಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement