ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುಮಕೂರು ಪಾಲಿಕೆ ಸದಸ್ಯರ ಹೇಳಿಕೆಗೆ ದಸಂಸ ಖಂಡನೆ

Rashmi Kasaragodu
Updated On : 13 Jun 2014, 2:07 am

ತಿಪಟೂರು: ತುಮಕೂರು ಮಹಾನಗರಪಾಲಿಕೆ ಸದಸ್ಯ ಎಚ್.ಆರ್.ಹನುಮಂತರಾಯಪ್ಪ ಕರ್ನಾಟಕ ದಲಿತ ಸಂಘರ್ಷ ಹಾಗೂ ದಲಿತ ಮುಖಂಡರ ಕುರಿತ ಹೇಳಿಕೆಯು ತೀವ್ರ ಖಂಡನೀಯ. ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ದಸಂಸ ತಾಲೂಕು ಅಧ್ಯಕ್ಷ ನಾಗತಿಹಳ್ಳಿ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ. ಸಂಘಟನೆ ಬಗ್ಗೆ ಏನೂ ತಿಳಿಯದ ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಹನುಮಂತರಾಯಪ್ಪ ತಮ್ಮ ವಾರ್ಡ್‌ನ ಸಮಸ್ಯೆಗಳಿಗೆ ಸ್ಪಂದಿಸದೆ, ಕೇವಲ ಪ್ರಚಾರಕ್ಕಾಗಿ ದಲಿತ ಹೋರಾಟಗಾರ ಪಿ.ಎನ್.ರಾಮಯ್ಯ ವಿರುದ್ಧ ಮಾತನಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ. ಸದಸ್ಯರು ಹನುಮಂತರಾಯಪ್ಪ, ವೆಂಕಟೇಶ್ ಮುಂತಾದವರ ಸದಸ್ಯತ್ವ ವಜಾಗೊಳಿಸಬೇಕೆಂದು ದಲಿತ ಮುಖಂಡರಾದ ಕಲ್ಲೇಶ್, ಮಂಜುನಾಥ್, ಡಿ.ಕುಮಾರ್,ಹೊನ್ನಪ್ಪ, ಮೋಹನ್, ಬಸವರಾಜು ಒತ್ತಾಯಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement