ಬೆಳೆ ನಷ್ಟ: ಬ್ಯಾಂಕಿಗೆ ಪರಿಹಾರ ಧನ
ಕುಣಿಗಲ್: 2013-14ನೇ ಸಾಲಿಗೆ ತೋಟಗಾರಿಕೆ ಬೆಳೆ ನಷ್ಟ ಹೊಂದಿರುವ ಸಣ್ಣ, ಅತಿಸಣ್ಣ ರೈತ ಫಲಾನುಭವಿಗಳಿಗೆ ಸರ್ಕಾರದಿಂದ ಪರಿಹಾರಧನ ಬಿಡುಗಡೆಯಾಗಿದ್ದು, ಪಟ್ಟಣದ ಎಸ್‌ಬಿಎಂ ಬ್ಯಾಂಕಿನಲ್ಲಿ ಜಮಾ ಮಾಡಲಾಗಿದೆ.ನಿಯಮದಂತೆ ತೋಟಗಾರಿಕೆ ಬೆಳೆ ಬೆಳೆದು 13-14ನೇ ಸಾಲಿನಲ್ಲಿ ನಷ್ಟಹೊಂದಿದ ಖಾತೆ, ಪಹಣಿ ಅವರ ಹೆಸರಿನಲ್ಲಿರುವ ರೈತರನ್ನು ಗುರುತಿಸಿ ಪರಿಹಾರ ನೀಡಬೇಕಿದೆ. ಆದ್ದರಿಂದ ಅರ್ಹಫಲಾನುಭವಿಗಳಿಗೆ ಅವರಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್. ಮೂಲಕ ಪಾವತಿ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಸೂಚನೆ ನೀಡಿರುವುದರಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆದು,ನಷ್ಟ ಹೊಂದಿರುವ ಅರ್ಹ ಫಲಾನುಭವಿ ರೈತರು ಗ್ರಾಮಲೆಕ್ಕಾಧಿಕಾರಿಗಳನ್ನು ಸಂಪರ್ಕಿಸಿ. ಯಾವುದೇ ಬ್ಯಾಂಕ್‌ನಲ್ಲಿರುವಖಾತೆ ಸಂಖ್ಯೆಯೊಂದಿಗೆ, ಅಗತ್ಯ ದಾಖಲೆ ಸಲ್ಲಿಸುವಂತೆ ಮತ್ತು ಮರಣಹೊಂದಿದ, ಜಂಟಿಖಾತೆಯಲ್ಲಿರುವ ಫಲಾನುಭವಿಗಳಿಗೆ ಸರ್ಕಾರದ ಮುಂದಿನ ಆದೇಶದ ಹೊರಡಿಸುವವರೆಗೂ ಪರಿಹಾರ ಧನ ವಿತರಣೆಗೆ ಅವಕಾಶ ಇಲ್ಲ ಎಂದು ತಹಸೀಲ್ದಾರ್ ಶಂಭುಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.