ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಜ್ಞಾನಿಗಳು, ಸರಕು ಆಸಕ್ತ ಗುಂಪುಗಳ ಚರ್ಚಾ ಸಂವಾದ

Rashmi Kasaragodu
Updated On : 13 Jun 2014, 2:07 am

ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್‌ನ  ಕೃಷಿ ವಿಜ್ಞಾನ ಕೇಂದ್ರದಲ್ಲಿ ತುಮಕೂರು ಜಿಲ್ಲೆ ವತಿಯಿಂದ ವಿಜ್ಞಾನಿಗಳು ಹಾಗೂ ಸರಕು ಆಸಕ್ತ ಗುಂಪುಗಳ ಚರ್ಚಾ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ನಿವೃತ್ತ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ ಉದ್ಘಾಟಿಸಿ, ವಿವಿಧ ಬೆಳೆಗಳ ಮಾರುಕಟ್ಟೆ ಸೌಲಭ್ಯಗಳ ಬಗ್ಗೆ ಮತ್ತು ಜಾಹಿರಾತುಗಳ ಮೂಲಕ ಸಂಘಗಳನ್ನು ಬಲಪಡಿಸುವುದರ ಬಗ್ಗೆ ಮಾಹಿತಿ ನೀಡಿದರು.
ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, 'ಸಂಘಗಳನ್ನು ಸಂಘಟಿಸುವುದರಿಂದ ವಿವಿಧ ಸರ್ಕಾರಿ ಇಲಾಖೆ, ಸಂಘ ಸಂಸ್ಥೆಗಳಿಂದ ದೊರಕುವ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು' ಎಂದು ತಿಳಿಸಿದರು. ಹಾಸನ ಕೃಷಿ ಕಾಲೇಜಿನ ಡೀನ್ ಡಾ.ಎಲ್.ಮಂಜುನಾಥ ಅವರು, ಬೈಂಡಿಂಗ್ ಮತ್ತು ಪ್ಯಾಕೇಜಿಂಗ್ ಮೂಲಕ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭವನ್ನು ರೈತರು ಪಡೆಯಬಹುದು' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ.ಶಂಕರ್, ಡಾ.ನಾಗಪ್ಪದೇಸಾಯಿ, ರೂಪಾ ಬಿ. ಪಾಟೀಲ್, ಡಾ. ಮಮತಾ, ಡಾ. ಶಿವಪ್ಪನಾಯಕ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಅರ್ಜುಮನ್ ಬಾನು, ಪ್ರದೀಪ್‌ಕುಮಾರ್ ಸೇರಿದಂತೆ ಕಲ್ಪಸಿರಿ ಮತ್ತು ಕಲ್ಪಗಂಗಾ ತೆಂಗಿನ ಮರ ಹತ್ತುವವರ ಬಳಗ, ಮಲ್ಲಿಕಾರ್ಜುನಸ್ವಾಮಿ ರಾಗಿ ಬೆಳೆಗಾರರ ಸಂಘ, ಮಾರುತಿ ತೊಗರಿ ಬೆಳೆಗಾರರ ಸಂಘದವರು ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ.ಜಿ.ಎಂ.ಸುಜಿತ್ ನಿರೂಪಿಸಿ, ಡಾ.ಕೆ.ಆರ್.ಶ್ರೀನಿವಾಸ್ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement