ಹುಳಿಯಾರು ಗ್ರಾಪಂ ಅಧ್ಯಕ್ಷರ ಆಯ್ಕೆ
ಹುಳಿಯಾರು: ಪಟ್ಟಣದ ಗ್ರಾಪಂ ನೂತನ ಅಧ್ಯಕ್ಷರಾಗಿ ಜೆಡಿಎಸ್ನ ಕಾಳಮ್ಮ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷೆಯಾಗಿದ್ದ ಪುಟ್ಟಿಬಾಯಿ ಅವರನ್ನು ಪಂಚಾಯ್ತಿ ಸದಸ್ಯರು ಅವಿಸ್ವಾಸ ನಿರ್ಣಯ ಮಂಡಿಸಿದ್ದರ ಫಲವಾಗಿ ಅವರು ಪದಚ್ಯುತಗೊಂಡಿದ್ದರಿಂದ ಅಧ್ಯಕ್ಷ ಸ್ಥಾನ ತೆರನಾಗಿತ್ತು. ಗುರುವಾರ ನಡೆದ ಚುನಾವಣೆಯಲ್ಲಿ ಪಂಚಾಯ್ತಿಯ ಒಟ್ಟು 33 ಸದಸ್ಯರ ಪೈಕಿ 30 ಮಂದಿ ಹಾಜರಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಜೆಡಿಎಸ್ ಬೆಂಬಲಿತ ಕಾಳಮ್ಮ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾದರು.
ಈ ಸಂಧರ್ಭದಲ್ಲಿ ಅಧ್ಯಕ್ಷೆ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಅಬಿದುನ್ನಿಸಾ, ಸದಸ್ಯರಾದ ಅಶೋಕ್ ಬಾಬು, ಗಂಗಣ್ಣ, ಜಹೀರ್ ಸಾಬ್, ಗೀತಾಬಾಬು, ಅನ್ಸರ್ ಅಲಿ, ಧನುಷ್, ರಂಗನಾಥ್, ಹೇಮಂತ್ ಇದ್ದರು.