ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಾಲೂಕು ದಲಿತ ಪ್ರಗತಿಪರ ವೇದಿಕೆ ಅಸ್ತಿತ್ವಕ್ಕೆ

Rashmi Kasaragodu
Updated On : 15 Jun 2014, 1:16 am

ಪಾವಗಡ: ತಾಲೂಕು ದಲಿತ ಪ್ರಗತಿ ಪರ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ತಾಲೂಕು ಹಿರಿಯ ಮುಖಂಡ ಕನ್ನಮೇಡಿ ಎಸ್.ಹನುಮಂತರಾಯಪ್ಪ ಅವರು ಆಯ್ಕೆಯಾಗಿದ್ದಾರೆ. ಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿ ಸೇರಿದಂತೆ ಒಟ್ಟು 15 ಮಂದಿ ಸಮಿತಿಯ ನಿರ್ದೇಶಕರಾಗಿ ನೇಮಕಗೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಸ್‌ಸಿ,ಎಸ್‌ಟಿ ಸೇರಿದಂತೆ ತಾಲೂಕಿನಲ್ಲಿ ಎಲ್ಲಾ ವರ್ಗದಲ್ಲಿ ದಲಿತರಿದ್ದು, ನಿರ್ಗತಿಕರ ಅಭಿವೃದ್ಧಿಗೆ ದನಿಯಾಗಬೇಕು. 30 ವರ್ಷ ಗಳಿಂದ ದಲಿತ ಪರ ಸಂಘಟನೆಗಳಿಗೆ ಬೆಂಬಲವಾಗಿ ನಿಂತು, ಎಲ್ಲಾ ವರ್ಗದ ಶೋಷಿತರ ಪರ ಕೆಲಸ ಮಾಡಿದ್ದೇನೆ. ಜನರಪ ಸೇವೆ ಹಿನ್ನಲೆಯಲ್ಲಿ ತಾಲೂಕು ದಲಿತ ಪರ ವೇದಿಕೆ ಕಟ್ಟಿ ಸಮಿತಿಯ ಸದಸ್ಯರ ಬೆಂಬಲದಿಂದ ಅಧ್ಯಕ್ಷನಾಗಿದ್ದೇನೆ. ನಾನು ಬದುಕಿರುವವರೆವಿಗೂ ದಲಿತ ಮತ್ತು ತಾಲೂಕು ಅಭಿವೃದ್ಧಿ ಶ್ರಮಿಸುವೆ ಎಂದು ಹನಮಂತರಾಯಪ್ಪ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement