ಶಾಲೆ ಬಿಟ್ಟವರನ್ನು ಮತ್ತೆ ಸೇರಿಸಿ
ಶ್ರೀರಂಗಪಟ್ಟಣ: ಶಾಲೆ ಬಿಟ್ಟು ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸುವ ಮೂಲಕ ಅವರಿಗೆ ವಿದ್ಯಾಭ್ಯಾಸ ನೀಡಬೇಕಿದೆ ಎಂದು 3ನೇ ಅಪರ ಜಿಲ್ಲಾಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್ ತಿಳಿಸಿದರು.ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಾನೂನು ಸೇವಾ ಸಮಿತಿ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನಡೆದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು, 14 ವರ್ಷದೊಳಗಿನ ಎಲ್ಲಾ ಮಕ್ಕಳು ಶಿಕ್ಷಣ ಪಡೆಯಬೇಕು ಎಂದು ಸರ್ಕಾರ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಅದನ್ನು ನಾವು ಜಾರಿ ರೂಪದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದರು. ನ್ಯಾ.ಡಿ.ಟಿ. ಪುಟ್ಟರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಎಸ್.ಎ. ಹಿದಾಯತುಲ್ಲಾ ಷರೀಫ್, ಎಸ್.ಎಂ.ಚೌಗಲೆ, ವಕೀಲರ ಸಂಘದ ಅಧ್ಯಕ್ಷ ಕೆ.ಕುಮಾರ್, ಸಹಾಯಕ ಸರ್ಕಾರಿ ವಕೀಲ ಎಸ್.ನಾರಾಯಣಸ್ವಾಮಿ, ಬಿಇಒ. ಹೊನ್ನರಾಜು, ಹೇಮಲತಾ ಮತ್ತಿತರರು ಇದ್ದರು.