ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಯುವಪೀಳಿಗೆ
ತುಮಕೂರು: ನೈಸರ್ಗಿಕ ಆಹಾರ ಪದ್ಧತಿ ಅನುಸರಿಸದ ಪರಿಣಾಮ ಇಂದಿನ ಯುವಪೀಳಿಗೆ 30-40 ವರ್ಷಕ್ಕೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಕೃಷಿ ತಜ್ಞ ಹಾಗೂ ವಿಜ್ಞಾನಿ ಡಾ. ಖಾದರ್ ವಿಷಾದಿಸಿದರು.
ಶ್ರೀಕೃಷ್ಣ ಮಂದಿರ ಸಭಾಗೃಹದಲ್ಲಿ ತುಮಕೂರು ಮಿತ್ರಕೂಟ, ಕೂಟ ಮಹಾಜಗತ್ತು, ಸಾಲಿಗ್ರಾಮ ಅಂಗಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಆಧುನಿಕ ಜೀವನಶೈಲಿಯಲ್ಲಿ ರೋಗ ನಿವಾರಣೆ ನಮ್ಮ ಕೈಯಲ್ಲಿ ಎಂಬ ವಿಷಯದ ಬಗ್ಗೆ ಮಾತನಾಡಿದರು. ಎಂಎನ್‌ಸಿಗಳು ಕೇವಲ ಲಾಭವನ್ನು ಗುರಿಯಾಗಿಸಿಕೊಂಡು ಉತ್ಪನ್ನಗಳನ್ನು ಸಿದ್ಧಪಡಿಸುತ್ತಿವೆಯೇ ಹೊರೆತು ಮನುಷ್ಯನ ಆರೋಗ್ಯವನ್ನು ಗುರಿಯಾಗಿಟ್ಟುಕೊಂಡು ಉತ್ಪಾದನೆ ಮಾಡುತ್ತಿಲ್ಲ ಎಂದರು. ಉಪನ್ಯಾಸ ಕಾರ್ಯಕ್ರಮದಲ್ಲಿ ಸಿ. ಯತಿರಾಜು, ಕೆ.ಎಸ್. ಗೋಪಾಲಕೃಷ್ಣರಾವ್, ಕೆ. ನರಸಿಂಹರಾವ್, ಪಿ. ಅಶೋಕ್, ಅನಂತರಾಮು ಮತ್ತಿತರರು ಇದ್ದರು.