ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪರಿಸರ ಪ್ರಜ್ಞೆ ವಿದ್ಯಾರ್ಥಿಗಳ ಜೀವಾಳವಾಗಬೇಕು: ಅಭಿಮತ

Mainashree
Updated On : 18 Jun 2014, 12:32 pm

ತುಮಕೂರು: ಪರಿಸರ ಪ್ರಜ್ಞೆ ವಿದ್ಯಾರ್ಥಿಗಳ ಜೀವಾಳವಾಗಬೇಕೆಂದು ತುಮಕೂರು ಮಹಾನಗರ ಪಾಲಿಕೆಯ ಸದಸ್ಯ ಪಟೇಲ್ ನಾಗರಾಜ್ ಅಭಿಪ್ರಾಯಪಟ್ಟರು. ತುಮಕೂರಿನ ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪರಿಸರ ಮಾನಸಿಕವಾಗಿ ಪರಿಣಾಮ ಬೀರುತ್ತದೆ ಎಂದ ನಾಗರಾಜ್, ದ್ವಿತೀಯ ಪಿಯು ಅವಧಿಯಲ್ಲಿ 2 ವರ್ಷಗಳ ಕಾಲ ಜಾಗೃತರಾಗಿ ವಿದ್ಯಾಭ್ಯಾಸ ಮಾಡುವಂತೆ ಕರೆ ನೀಡಿದರು. ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಪ್ರಿನ್ಸಿಪಾಲ್ ಪ್ರೊ. ಕುಮಾರಸ್ವಾಮಿ, ಸಾಧಕರ ಸಾಧನೆಯ ಹೆಜ್ಜೆಗಳನ್ನು ಬಿಡಿ-ಬಿಡಿಯಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ.ಎಚ್.ಎಸ್. ನಿರಂಜನಾರಾಧ್ಯ, ಸಪ್ತಗಿರಿ ಪಪೂ ಕಾಲೇಜು 91.3 ರಷ್ಟು ಫಲಿತಾಂಶವನ್ನು ಪಡೆದಿದ್ದು, ವಿದ್ಯಾರ್ಥಿ ಹಾಗೂ ಉಪನ್ಯಾಸಕ ವೃಂದವನ್ನು ಅಭಿನಂದಿಸಿದರು. ಶೈಕ್ಷಣಿಕ ಸಂಯೋಜಕ ಮೃಣಾಲ್ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅರ್ಚನಾ ಎಸ್. ಕುಮಾರ್ ವಹಿಸಿದ್ದರು. ಸಪ್ತಗಿರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕಿಯಾದ ಹರಿಣಿ ಸ್ವಾಗತಿಸಿ, ಡಾ. ರೇಣುಕಾ ಪ್ರಸಾದ್ ವಂದಿಸಿದರು. ಡಿ.ವಿ. ಪೂರ್ಣಿಮಾ, ಎಸ್.ಜಿ. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement