ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಾಲಕಿಯರ ಹಾಸ್ಟೆಲ್ ಪಕ್ಕ ರಾಶಿ ರಾಶಿ ಕಸ

Mainashree
Updated On : 18 Jun 2014, 12:31 pm

ಹುಳಿಯಾರು: ಪಟ್ಟಣದ ಗಾಂಧಿಪೇಟೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಆವರಣ ಪಕ್ಕ ರಾಶಿರಾಶಿ ಕಸ ಬಿದ್ದಿದ್ದರೂ ಸಹ ಎದುರಲ್ಲೇ ಇರುವ ಪಂಚಾಯ್ತಿವರಾಗಲಿ, ಹಾಸ್ಟೆಲ್ ಅಧಿಕಾರಿಗಳಾಗಲಿ ಇತ್ತ ಗಮನಹರಿಸಿಲ್ಲ.  ವಿದ್ಯಾರ್ಥಿ ನಿಲಯದ ಮುಖ್ಯದ್ವಾರದ ಕಾಂಪೌಂಡ್ ಬಯ ಜಾಗ ತಿಪ್ಪೆಯಾಗಿ ಬಳಸುತ್ತಿದ್ದು, ಕಲ್ಲಿನ ರಾಶಿ,ಪ್ಲಾಸ್ಟಿಕ್ ಚೀಲ, ಕಸ ಸೇರಿದಂತೆ ಇತರ ತ್ಯಾಜ್ಯಗಳನ್ನು ಇಲ್ಲಿ ತಂದು ಸುರಿಯಲಾಗುತ್ತಿದೆ. ಇಲ್ಲಿರುವ ಕಸದ ರಾಶಿಯನ್ನು ಶೀಘ್ರ ತೆರವುಗೊಳಿಸದೇ ಹೋದಲ್ಲಿ ಮಳೆಬಂದಾಗ ಕೊಳೆತು ಸಾಂಕ್ರಾಮಿಕರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಡೆಂಘೀಗೆ 5 ವರ್ಷದ ಬಾಲಕ ಬಲಿ
ಮಧುಗಿರಿ: ತಾಲೂಕಿನ ದೊಡ್ಡಯಲ್ಕೂರು ಗ್ರಾಮದ ವಿದ್ಯಾರ್ಥಿ ಡೆಂಘೀ ಜ್ವರಕ್ಕೆ ಬಲಿಯಾದ ಘಟನೆ ನಡೆದಿದೆ.
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಡಾ.ಧನಂಜಯ ಅವರ ಪುತ್ರ  ಪ್ರೀತಂ(8) ಮೃತಪಟ್ಟ ವಿದ್ಯಾರ್ಥಿ. ಪ್ರೀತಂಗೆ ಒಂದು ವಾರದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಪೋಷಕರು ಮಧುಗಿರಿ ಮತ್ತು ತುಮಕೂರಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಶನಿವಾರ ಮೃತಪಟ್ಟು ಭಾನುವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಇದೇ ನಾರಾಯಣಪ್ಪ ಅವರ ಪುತ್ರ ಚೇತನ್(5) ಎಂಬಾತನಿಗೂ ಡೆಂಘೀ ಜ್ವರ ಕಾಣಿಸಿ ಕೊಂಡು ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿಗೊಳ್ಳದಿದ್ದರಿಂದ ಡೆಂಘೀಗೆ ಬಾಲಕರು ಬಲಿಯಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಗ್ರಾಪಂ ವಿರುದ್ಧ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ ಗ್ರಾಮದಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ. ಗ್ರಾಮಕ್ಕೆ ತಾಲೂಕು ವೈದ್ಯಾಧಿಕಾರಿ ಪ್ರಸನ್ನಕುಮಾರ್ ಭೇಟಿ ನೀಡಿ, ಪ್ರೀತಂ ಸತ್ತಿದ್ದು ಡೆಂಘೀಯಿಂದಲೇ ಸತ್ತಿದ್ದು ಎಂದು ಖಚಿತವಾಗಿ ಹೇಳಲಾಗದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement