ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ವಿಫುಲ

Mainashree
Updated On : 18 Jun 2014, 12:32 pm

ತುಮಕೂರು: ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಅಪಾರ ಅವಕಾಶಗಳು ಲಭ್ಯವಿದೆ ಎಂದು ಬೆಂಗಳೂರಿನ ಆರ್ಭ್ ಎನರ್ಜಿ ಕಂಪನಿ ಜನರಲ್ ಮ್ಯಾನೇಜರ್ ನಾಗರಾಜ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಹೇಮಾದ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ಸಮಾಜಕಾರ್ಯ ವಿಭಾಗ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳು ವೃತ್ತಿಪರತೆ ಗಳಿಸುವ ಮೂಲಕ ವೃತಿಯಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂದರು.
ಪ್ರಯತ್ನ ಇಲ್ಲದೆ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ನಿರಂತರ ಕಲಿಕೆಯತ್ತ ಗಮನಹರಿಸಿ ಎಂದ ಅವರು ವಿದ್ಯಾರ್ಥಿಗಳಿಗೆ ಉದ್ಯೋಗ ಗಳಿಸುವುದರ ಬಗ್ಗೆ ಸಲಹೆಗಳನ್ನು ನೀಡಿದರು. ಸಹಬಾಳ್ವೆ ಸಂಘದ ಅಧ್ಯಕ್ಷೆ ದೀಪಿಕಾ ಮಾತನಾಡಿ ತೃತೀಯ ಲಿಂಗದವರಿಗೂ ಸಮಾಜದಲ್ಲಿ ಸಮಾನ ಸ್ಥಾನಮಾನ ದೊರಕುವಂತಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಹೇಮಾದ್ರಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ವಿ.ಟಿ. ತಿಪ್ಪೆಸ್ವಾಮಿ ಮಾತನಾಡಿ ಉತ್ತಮ ವೃತ್ತಿ ಜೀವನವನ್ನು ಹೊಂದಲು ಅನುಭವಿಗಳ ಮಾರ್ಗದರ್ಶನದಂತೆ ನಡೆಯಿರಿ ಎಂದರು.  ಸುರೇಶ್ ರಾಣೆ, ಬಿ.ಕೆ.ನಟರಾಜ, ಮೋಹನ್. ವಿ.ಟಿ, ಗಂಗಾಮಣಿ ಎಚ್.ಆರ್, ನಿಸರ್ಗಪ್ರಿಯಾ. ಟಿ.ಎಸ್ ಹಾಗೂ ಪುಟ್ಟರಾಜು ಪಾಲ್ಗೊಂಡಿದ್ದರು. ಲತಾ ನಿರೂಪಿಸಿ, ಶಿವರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement