ಸ್ತ್ರೀಶಕ್ತಿ ಸಂಘಗಳ ಕೊಡುಗೆ ಅಪಾರ
ತಿಪಟೂರು: ಮಹಿಳೆಯರು ಸ್ತ್ರೀಶಕ್ತಿ ಸಂಘಗಳು ಮತ್ತು ಸ್ವಸಹಾಯ ಸಂಘಗಳಿಂದ ತಮ್ಮ ಜೀವನವನ್ನು ತಾವೇ ನಿರ್ವಹಿಸಿಕೊಂಡು ಆದರ್ಶ ಮಹಿಳೆಯಾಗಿ ಸ್ವಾವಲಂಬಿ ಜೀವನ ನಡೆಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ರಾಜಣ್ಣ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ ಇಲಾಖೆಯ ನಿವೃತ್ತ ನೌಕರರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲಾಖೆಯಲ್ಲಿ ನೌಕರರಿಗೆ ಉತ್ತಮ ಸೇವೆ ಮಾಡುವ ಅವಕಾಶವಿದೆ. ನಿವೃತ್ತರಾಗಿರುವ ನೌಕರರು ತಮ್ಮ ಸೇವೆಯನ್ನು ಇಲಾಖೆಗೆ ಅರ್ಪಿಸಿರುವುದು ಶ್ಲಾಘನೀಯ ಎಂದರು. ಸಿಡಿಪಿಒ ಪಿ.ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಎಸಿಡಿಪಿಒ ಸುಂದರಮ್ಮ, ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾಮಿ, ಪ್ರಥಮ ದರ್ಜೆ ಸಹಾಯಕಿ ಗಟ್ಟಿ ನಿರ್ಮಲಾ ಸೇರಿ ಏಳು ಜನ ಅಂಗನವಾಡಿ ಸಹಾಯಕಿಯರಿಗೆ ಹಾಗೂ ಅತ್ಯುತ್ತಮ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪಡೆದ ಮಂಜುಳಾ, ರಾಮನಹಳ್ಳಿ ಗ್ರಾಮದ ಶ್ರೀ ಪಾರ್ವತಿ ಸ್ತ್ರೀಶಕ್ತಿ ಸಂಘವನ್ನು ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ಎಂದು ಸನ್ಮಾನಿಸಲಾಯಿತು.
ನವೀನ, ಅನುಸೂಯ, ಮಂಜುಳಾ, ದೀಪಾ ಪಿ.ಕಮತೆ, ಬಿ.ಎನ್.ಪ್ರೇಮ, ಬಿ.ಎಸ್.ಚಿದಾನಂದಮೂರ್ತಿ ಇದ್ದರು.