ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮತದಾನ ಇಂದು

Mainashree
Updated On : 19 Jun 2014, 10:39 am

ತುಮಕೂರು:    ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಗೆ ಜಿಲ್ಲಾಡಳಿತ ಸಜ್ಜಾಗಿದೆ.
ನಾಳೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜಿಲ್ಲೆಯಲ್ಲಿ ಮತದಾನ ನಡೆಯಲಿದೆ.  ತಮಕೂರು ಜಿಲ್ಲೆಯಲ್ಲಿ ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಕುಣಿಗಲ್, ತುರುವೇಕೆರೆ, ಚಿ.ನಾ.ಹಳ್ಳಿ, ಗುಬ್ಬಿ ತಾಲೂಕುಗಳಲ್ಲಿ ತಹಸೀಲ್ದಾರ್ ಅವರನ್ನು, ತಿಪಟೂರಿನಲ್ಲಿ ಉಪವಿಭಾಗಾಧಿಕಾರಿಗಳನ್ನು ಮತ್ತು ತುಮಕೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಂಜಯ್ಯ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮ್‌ಕುಮಾರ್, ಕಂದಾಯ ಅಧಿಕಾರಿ ಲಕ್ಷ್ಮಣ್ ಅವರನ್ನು  ಸೆಕ್ಟೋರಲ್ ಅಧಿಕಾರಿಗಳನ್ನಾಗಿ ನೇಮಿಸಿದೆ.
ಪ್ರತಿ ಮತಗಟ್ಟೆಯಲ್ಲಿ ವಿಡಿಯೋಗ್ರಾಫರ್‌ಗಳನ್ನು ನೇಮಕ ಮಾಡಲಾಗಿದ್ದು, ಮತಚಲಾಯಿಸುವ ಪ್ರತಿ ಮತದಾರರನ್ನು ವಿಡಿಯೋಗ್ರಫಿ ಮಾಡಲಾಗುವುದು ಮತ್ತು ಪ್ರತಿ ಮತಗಟ್ಟೆಗೆ ಒಬ್ಬ ಹೆಡ್‌ಕಾನ್ಸ್‌ಟೇಬಲ್, 3 ಕಾನ್ಸ್‌ಟೇಬಲ್(ಒರ್ವ ಮಹಿಳಾ ಕಾನ್ಸ್‌ಟೇಬಲ್ ಸೇರಿ) ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮತದಾರರು ಮತಕೇಂದ್ರಗಳ ಒಳಗೆ ಪ್ರವೇಶಿಸುವಾಗ ಮೊಬೈಲ್, ಕ್ಯಾಮೆರಾ, ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಬಾರದು. ಉಲ್ಲಂಘನೆ ಮಾಡಿದಲ್ಲಿ ಪೋಲೀಸರ ವಶಕ್ಕೆ ಪಡೆದುಕೊಳ್ಳಲಾಗುವುದು. 100 ಮೀ. ವ್ಯಾಪ್ತಿಯೊಳಗೆ ಯಾವುದೇ ಬಿತ್ತಿ ಪತ್ರಗಳು ಮತ್ತು ಅಭ್ಯರ್ಥಿ ಪರ ಪ್ರಚಾರ ಮಾಡುವುದು ನಿಷೇಧವಿದೆ.
ಪೋಲಿಂಗ್ ಸ್ಟೇಷನ್ 40- ಪಾವಗಡ ತಾಲೂಕು 800 ಮತದಾರರು, 41-ಪಾವಗಡ 645 ಮತದಾರರು, 46-ಶಿರಾ 985 ಮತದಾರರು, 47-ಶಿರಾ 753 ಮತದಾರರು, 48-ಮಧುಗಿರಿ 1 ಸಾವಿರ ಮತದಾರರು, 49-ಮಧುಗಿರಿ 980  ಮತದಾರರು, 55-ಕೊರಟಗೆರೆ 982 ಮತದಾರರು, 56-ಸಿ.ಎನ್.ಹಳ್ಳಿ 900 ಮತದಾರರು, 57-ಸಿ.ಎನ್. ಹಳ್ಳಿ 780 ಮತದಾರರು, 58-ತಿಪಟೂರು 1 ಸಾವಿರ ಮತದಾರರು, 59-ತಿಪಟೂರು 1 ಸಾವಿರ ಮತದಾರರು, 60-ತಿಪಟೂರು 1099 ಮತದಾರರು, 61-ಗುಬ್ಬಿ 1 ಸಾವಿರ ಮತದಾರರು, 62-ಗುಬ್ಬಿ 1194 ಮತದಾರರು, 63-ತುಮಕೂರು 1 ಸಾವಿರ ಮತದಾರರು, 64-ತುಮಕೂರು 1 ಸಾವಿರ ಮತದಾರರು, 65-ತುಮಕೂರು 1 ಸಾವಿರ  ಮತದಾರರು,   66-ತುಮಕೂರು 1 ಸಾವಿರ ಮತದಾರರು, 67-ತುಮಕೂರು 1 ಸಾವಿರ ಮತದಾರರು, 68-ತುಮಕೂರು 1 ಸಾವಿರ  ಮತದಾರರು, 69,70, 71, 72,73 1 ಸಾವಿರ ಮತದಾರರು.
74 1278 ಮತದಾರರು, 86-ತುರುವೇಕೆರೆ 900 ಮತದಾರರು, 87-ತುರುವೇಕೆರೆ 861 ಮತದಾರರು, 88-ಕುಣಿಗಲ್ 800 ಮತದಾರರು, 89-ಕುಣಿಗಲ್ 677 ಮತದಾರರು. ಒಟ್ಟಾರೆ ಜಿಲ್ಲೆಯಾದ್ಯಂತ 28633  ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.  ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕಾರ್ಯವನ್ನು ತಾಲೂಕು ಕಚೇರಿಗಳಲ್ಲಿ ನಡೆಸಲಾಗುವುದು. ತಾಲೂಕಿನಿಂದ ಸ್ವೀಕೃತವಾದ ಮತಪೆಟ್ಟಿಗೆಗಳನ್ನು ಜೂ.20ರಂದು ಜಿಲ್ಲಾಧಿಕಾರಿಗಳ ಕಚೇರಿಯ ಕೆಎಸ್‌ಡಬ್ಲ್ಯೂಎಎನ್ ಹಾಲ್‌ನಲ್ಲಿ ತಾತ್ಕಾಲಿಕ ಭದ್ರತಾ ಕೊಠಡಿಯಲ್ಲಿಟ್ಟು, ನಂತರ ಅಂದೇ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡದಲ್ಲಿನ ಭದ್ರತಾ ಕೊಠಡಿಗೆ ಸಾಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ತುರುವೇಕೆರೆ: 2 ಮತಗಟ್ಟೆ
ತುರುವೇಕೆರೆ:  ಶುಕ್ರವಾರ ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಲು ಎರಡು ಮತಗಟ್ಟೆಗಳನ್ನು ಸ್ಥಾಪಸಲಾಗಿದೆ ಎಂದು ತಹಸೀಲ್ದಾರ್ ಮಾರೇಗೌಡ ತಿಳಿಸಿದ್ದಾರೆ. ಪಟ್ಟಣದ ತಾಲೂಕು ಕಚೇರಿಯಲ್ಲಿ ಸಭಾಂಗಣದಲ್ಲಿ 1ರಿಂದ 900 ರವರೆಗಿನ ಮತದಾರರಿಗೆ ಒಂದು ಮತಗಟ್ಟೆ, 901ರಿಂದ 1761ರವರೆಗಿನ ಮತದಾರರಿಗೆ ಪಟ್ಟಣ ಪಂಚಾಯ್ತಿಯ ಹಳೇ ಕಟ್ಟಡದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆ ಸಂಖ್ಯೆ 86ಕ್ಕೆ ಷಣ್ಮುಖ ಶೆಟ್ಟಿ, ಮತಗಟ್ಟೆ ಸಂಖ್ಯೆ 87ಕ್ಕೆ ಟಿ.ತಮ್ಮಣ್ಣ ಚುನಾವಣಾಧಿಕಾರಿಯಾಗಿದ್ದಾರೆ.  ಪ್ರತಿ ಮತಗಟ್ಟೆಗೆ ಚುನಾವಣಾಧಿಕಾರಿ ಸಹಿತ 5 ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಗೆ ಮೂವರು ಪೋಲಿಸರನ್ನೂ ನೇಮಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments