ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೋಡಿಗೆ ಬೀಳುತ್ತೆ ಕೋಳಿ ಕಸ

Mainashree
Updated On : 21 Jun 2014, 10:22 am

ಇನ್ನು ಕಸ ವಿಲೇವಾರಿಗೆ ಸೂಕ್ತ ವಾಹನಗಳಿದ್ದರೂ ಕಸ ಎತ್ತುವಳಿ ಮಾಡಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಬೇಕಾದ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಕಸವನ್ನು ಸಮೀಪದ ಗ್ರಾಪಂ ವ್ಯಾಪ್ತಿಗಳಲ್ಲಿನ ಮುಖ್ಯರಸ್ತೆ ಬದಿಯಲ್ಲೇ ಸುರಿದು ಪಟ್ಟಣದ ಕಸ ಗ್ರಾಮಾಂತರ ಪ್ರದೇಶಗಳಿಗೆ ಹಾಕುವಂತೆ ಮಾಡುತ್ತಿರುವುದು ಗ್ರಾಪಂಗಳಿಗೆ ತಲೆನೋವಾಗಿದೆ. ಕೋಳಿ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಕೋಳಿ ತ್ಯಾಜ್ಯವನ್ನು ಹೇರೂರು ಗ್ರಾಪಂ ಸಮೀಪದ ಕರೆಕಲ್ಲು ಸಮೀಪ ಸುರಿದಿರುವ ಕಾರಣ ಆ ಗ್ರಾಮದ ವ್ಯಾಪ್ತಿಯಲ್ಲಿನ ನಾಗರಿಕರು ಪರದಾಡುವಂತಾಗಿದೆ. ಪಟ್ಟಣದಲ್ಲಿ ಹಿಂದುಳಿದ ವಾರ್ಡ್‌ಗಳಾದ ಕೋಟೆ, ಗುಜ್ಜಾರಿ ಮೊಹಲ್ಲಾ, ಸಂತೇಮೈದಾನ ಸಮೀಪ, ಸತ್ತಾರ್ ಖಾನ್ ಬೀದಿ, ಪುರಸಭೆ ಬಸ್ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶದಲ್ಲಿ ಕಸವನ್ನು ಮುಖ್ಯ ಚರಂಡಿ ಪಕ್ಕದಲ್ಲೇ ಹಾಕಿದ್ದು, ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡದ ಕಾರಣ ಕಸ ಚರಂಡಿಗೆ ಬಿದ್ದು, ಕೊಳಚೆ ನೀರು ಕಟ್ಟಿಕೊಂಡು ಸಾಂಕ್ರಾಮಿಕ ರೋಗಗಳು ಉಲ್ಬಣಕ್ಕೆ ಕಾರಣವಾಗಿದೆ. 8 ಚದರ ಕಿಮೀ ವಿಸ್ತೀರ್ಣ ಹೊಂದಿರುವ ಪುರಸಭೆ ಕಸ ವಿಲೆವಾರಿಗೆ ವಾರ್ಷಿಕ ಲಕ್ಷಾಂತರ ರು. ವೆಚ್ಚ ಮಾಡುತ್ತಿದ್ದರೂ ಕಸ ವಿಲೇವಾರಿಯಾಗದೆ ನಾಗರಿಕರು ಪರದಾಡುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement