ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಿ.ಎಸ್. ಪುರ ಎಸ್‌ಐ ಉಜಿನಪ್ಪ ಅಮಾನತು ಮಾಡಿ

Mainashree
Updated On : 21 Jun 2014, 10:23 am

ತುಮಕೂರು: ಸಿ.ಎಸ್. ಪುರ ಪೊಲೀಸ್ ಠಾಣೆ ಎಸ್‌ಐ ಉಜ್ಜಿನಪ್ಪ ಅವರನ್ನು ಅಮಾನತುಗೊಳಿಸುವಂತೆ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ತಿಂಗಳ 20 ರಂದು ಕಾಂಗ್ರೆಸ್ ಮುಖಂಡ ಮಸಾಲೆ ಜಯರಾಂ ಅವರ ಒತ್ತಡಕ್ಕೆ ಮಣಿದು ಮೋದಿನಾಲಿ ಹಾಗೂ ಅವರ ಪತ್ನಿ ಅಮೀದಾ ಅವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ (ಅತ್ಯಾಚಾರ) ಇಬ್ಬರನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಊರಲ್ಲೇ ಇಲ್ಲದ, ಮಹಾರಾಷ್ಟ್ರಕ್ಕೆ ಹಣ್ಣಿನ ವ್ಯಾಪಾರಕ್ಕೆ ಹೋಗುವ ವ್ಯಕ್ತಿಯನ್ನು ಸುಳ್ಳು ಕೇಸ್ ಹಾಕಿ ಬಂಧಿಸಲಾಗಿದೆ. ಮೆಡಿಕಲ್ ಸೇರಿದಂತೆ ಯಾವುದೇ ಪರೀಕ್ಷೆ ಮಾಡದೆ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ತಾವು ಎಸ್‌ಐ ಅವರ ಬಳಿ ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದಾಸೇಗೌಡನಪಾಳ್ಯದ ವಾಸಿ ಮಸಾಲೆ ಜಯರಾಂ ಅವರ ಸೋದರ ಮಾವನ ಹೆಂಡತಿ ಜಯಮ್ಮ (55) ಇವರಿಂದ ಹಣ ಪಡೆದು ಹಾಗೂ ಉದ್ದೇಶಪೂರ್ವಕವಾಗಿ ಕೆಲವರ ಒತ್ತಡಕ್ಕೆ ಮಣಿದು ಕೇಸ್ ಹಾಕಲಾಗಿದೆ. ಯಾವುದೇ ವಿಚಾರಣೆಯಿಲ್ಲದೆ ಜೈಲಿಗೆ ಕಳುಹಿಸಲಾಗಿದೆ ಎಂದು ದೂರಿದ್ದಾರೆ. ಈಗಾಗಲೇ ಎಸ್ಪಿ ಸೇರಿದಂತೆ ಎಲ್ಲರಿಗೂ ಎಸ್‌ಐ ಪೊಲೀಸ್ ಸಿಬ್ಬಂದಿಯಾದ ಉಮೇಶ್, ಎಸ್.ಕೆ. ಶ್ರೀಧರ, ಎಚ್.ಟಿ. ಬೋರಯ್ಯ ಮೋಹನ ಇವರ ವಿರುದ್ಧ ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ. ಈ ಹಿನ್ನೆಲೆಯಲ್ಲಿ ತಾವು ಎಸ್ಪಿ ಕಚೇರಿ ಎದುರು ಧರಣಿ ನಡೆಸುವುದಾಗಿಯೂ, ಇವರೆಲ್ಲರನ್ನೂ ಅಮಾನತುಗೊಳಿಸುವವರೆಗೂ ಧರಣಿ ಮುಂದುವರೆಸುವುದಾಗಿ ಕೃಷ್ಣಪ್ಪ ತಿಳಿಸಿದರು.
ಮಸಾಲೆ ರಿಯಲ್ ಎಸ್ಟೇಟ್: ಕಾಂಗ್ರೆಸ್ ಮುಖಂಡ ಮಸಾಲೆ ಜಯರಾಂ ರಿಯಲ್ ಎಸ್ಟೇಟ್, ಬಡ್ಡಿ ವ್ಯಾಪಾರ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಸಣ್ಣ-ಪುಟ್ಟ ಹಿಡುವಳಿದಾರರಿಗೆ ಜಮೀನನ್ನು ಪುಡಿಗಾಸಿಗೆ ಖರೀದಿಸುತ್ತಿದ್ದಾರೆ. ಈ ಸುಳ್ಳು ಅತ್ಯಾಚಾರದ ಕೇಸಿಗೆ ಇದೇ ಮೂಲ ಕಾರಣವಾಗಿದ್ದು, ಕೂಡಲೇ ಸರ್ಕಾರ, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕೆಂದು ಕೃಷ್ಣಪ್ಪ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement